ವಿಟ್ಲ : ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.
ಕಳ್ಳರು ತೂಕದ ಯಂತ್ರ, ಗ್ಯಾಸ್, ರೆಗ್ಯುಲೇಟರ್ ಜೊತೆಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಕಳವುಗೈದಿದ್ದಾರೆ.
ಒಟ್ಟು 50,000/- ರೂ.ಗಳಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕಳವುಗೈಯಲಾಗಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಲತಾ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.