ಪುತ್ತೂರು: ಮುಖ್ಯ ರಸ್ತೆಯ ಮಹಿಳಾ ಠಾಣಾ ಮುಂಭಾಗದಲ್ಲಿ ಅರ್ಧ ಭಾಗ ತೆರವುಗೊಳಿಸಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಹಳೆಯ ಕಟ್ಟಡವನ್ನು ಜೂ.12ರಂದು ತೆರವುಗೊಳಿಸಲಾಗಿದೆ.
ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಲ್ಲಿ ದೈಮದ ಕಿರುವಾಳು ಆಗುಸುವ ವೇಳೆ ಸಮಸ್ಯೆಯಾಗುತ್ತಿದೆ ಎನ್ನುವ ಕಾರಣಕ್ಕಾಗಿ ಕಟ್ಟಡದ ಆರ್ಧ ಭಾಗವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿತ್ತು.ಉಳಿದ ಭಾಗವನ್ನು ಹಾಗೆಯೇ ಬಿಡಲಾಗಿತ್ತು.
ಇದೀಗ ಕಟ್ಟಡವು ಮಳೆಗೆ ಕುಸಿಯಲಾರಂಭಿಸಿತ್ತು. ಕೆಲ ದಿನಗಳ ಹಿಂದೆ ಸಂಜೆ ವೇಳೆ ಕಟ್ಟಡದ ಕಲ್ಲುಗಳು ಜರಿದು ಬಿದ್ದಿರುವುದು ಸಾರ್ವಜನಿಕ ಭೀತಿಗೆ ಕಾರಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಕಟ್ಟಡದ ಬಳಿ ಬ್ಯಾರಿಕೇಡ್ ಅಳವಡಿಸಿ,ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಬ್ಯಾನರ್ ಅಳವಡಿಸಲಾಗಿತ್ತು.
ಇದೀಗ ಕಟ್ಟಡದ ಮಾಲಕರು, ಪೊಲೀಸರು, ನಗರ ಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡವನ್ನು ತೆರವುಗೊಳಿಸಲಾಗಿದೆ.

























