ಪುತ್ತೂರು : ಆಟೋ ಬಾಡಿಗೆ ವಿಚಾರವಾಗಿ ಆಟೋ ಚಾಲಕರೋರ್ವರಿಗೆ ಇನ್ನೋರ್ವ ಆಟೋ ಚಾಲಕ ಹಲ್ಲೆ ನಡೆಸಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಆಡೂರು ನಿವಾಸಿ ವಿನೋದ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಜು.23 ರಂದು ವಿನೋದ್ ಕುಮಾರ್ ಎಂಬವರಿಗೆ ಆಟೋರಿಕ್ಷಾ ಚಾಲಕ ಬ್ರಿಜೇಶ್ ಎಂಬವರು ಕರೆ ಮಾಡಿ ಆಟೋ ಬಾಡಿಗೆ ವಿಚಾರದಲ್ಲಿ ತಕರಾರು ತೆಗೆದು, ಬೆದರಿಕೆ ಒಡ್ಡಿದ್ದು, ಜು.24 ರಂದು ಬೆಳಿಗ್ಗೆ ವಿನೋದ್ ಆಟೋರಿಕ್ಷಾದಲ್ಲಿ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿರುವ ವೈನ್ ಶಾಪ್ ಬಳಿಯಲ್ಲಿದ್ದಾಗ, ಬ್ರಿಜೇಶ್ ಆತನ ಆಟೋರಿಕ್ಷಾದಲ್ಲಿ ಚೇತನ್ ಮತ್ತು ಕಿಶೋರ್ ರನ್ನು ಕುಳ್ಳಿಸಿರಿಕೊಂಡು ಬಂದು, ವಿನೋದ್ ರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 87/2024, ಕಲಂ:-126(2),115(2) ಜೊತೆಗೆ 3(5) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.