ಪುತ್ತೂರು :ಹಿಂದುಳಿದ ವರ್ಗಗಳ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಗೋ ಪೂಜಾ ಆಚರಿಸುವ ಕುರಿತಂತೆ ಗೋವಿನ ಸಂರಕ್ಷಣಾ ಕಾರ್ಯದ ಕುರಿತಂತೆ ವಿನೂತನ ಕಾರ್ಯಕ್ರಮವೊಂದು ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರ ಮನೆಯಲ್ಲಿ ನಡೆಯಿತು.
.ಭಾರತೀಯ ಜನತಾ ಪಕ್ಷದ ಅಧ್ಯಕ್ಷರು, ಸದಸ್ಯರ ಮುಂದಾಳತ್ವದೊಡನೆ ಕಾರ್ಯಕ್ರಮವು ನಡೆದಿದ್ದು, ಗೋವಿನ ರಕ್ಷಣೆ, ಗೋ ಹತ್ಯೆ ನಿಷೇಧ, ಭಾರತೀಯ ಹಿಂದೂ ಧರ್ಮದ ಪೂಜ್ಯನೀಯ ದೇವಾನುದೇವತೆಗಳ ಆಗರ ಗೋವನ್ನು ಭಕ್ತಿ ಶ್ರದ್ಧೆಯಿಂದ ಪ್ರಾರ್ಥಿಸಿ, ಪೂಜಿಸಿ, ರಕ್ಷಿಸುವ ವಿಭಿನ್ನ ಕಾರ್ಯಕ್ರಮ ಇದಾಗಿತ್ತು..ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವೂ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದು, ಇದರ ವಿಜಯೋತ್ಸವ ಕಾರ್ಯವಾಗಿ, ಸರ್ಕಾರಕ್ಕೆ ಇಂತಹ ಮಹೋನ್ನತ ಯೋಜನಾ ಹೋರಾಟವನ್ನು ಜಾರಿಗೆ ತಂದ ಸಂಭ್ರಮದ ನಿಟ್ಟಿನಲ್ಲಿ ಪುತ್ತೂರಿನ ನಗರ ಮಂಡಲದ ಹಿಂದುಳಿದ ಮೋರ್ಚಾ ವತಿಯಿಂದ ವಿಶೇಷವಾಗಿ ಈ ಕಾರ್ಯವನ್ನು ನಡೆಸಿತು..
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ್,ನಗರ ಸಭಾ ಸದಸ್ಯ ಶಿವರಾಮ ನಗರ ಮಂಡಲ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೇರಿಯಕೋಡಿ, ಕಾರ್ಯದರ್ಶಿಗಳಾದ ಅರ್ಪಣಾ, ಗೋವರ್ಧನ ಗೋವರ್ಧನ ಕುಮೇರಡ್ಕ ನಗರ ಮಂಡಲದ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ರವಿ ಪೂಜಾರಿ, ದಿವಾಕರ ಪೂಜಾರಿ, ನಗರ ಮಂಡಲದ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ, ಒಬಿಸಿ ಮೋರ್ಚಾದ ಖಜಾಂಜಿ ರಾಜೇಶ್ ಕೆ ಮರೀಲ್ ಸೇರಿ ಹಲವರು ಉಪಸ್ಥಿತರಿದ್ದರು..