ಪುತ್ತೂರು: ವಾಸ್ತವ್ಯವಿದ್ದ ಮನೆ ಮಳೆಯಿಂದಾಗಿ ಹಾನಿಗೊಳಗಾಗಿದ್ದು ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡುವಂತೆ ಕಸಬಾ ಗ್ರಾಮದ ಹಾರಾಡಿ ನಿವಾಸಿ ಕಲ್ಯಾಣಿ ಎಂಬ ಮಹಿಳೆಯೋರ್ವರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದು, ವಾಸವಾಗಿದ್ದ ಮನೆಯೂ ಮಳೆಯಿಂದಾಗಿ ಹಾನಿಯಾಗಿದ್ದು,ವಾಸವಾಗದ ಸ್ಥಿತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಬೇರೆಯವರ ಮನೆಯಲ್ಲಿ ವಾಸವಾಗಿದ್ದೇನೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಪ್ರಾಕೃತಿಕ ವಿಕೋಪದಡಿಯಲ್ಲಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ಮನವಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ಕೇಶವ್ ಪಡೀಲ್, ಸತೀಶ್ ಪಡೀಲ್,
ಗಣೇಶ್ ಹೆಚ್ ಪಡೀಲ್, ವಿವೇಕ್ ಪಡೀಲ್, ಅಶೋಕ್ ಪಡೀಲ್,ಶರತ್ ಪಡೀಲ್ ಉಪಸ್ಥಿತರಿದ್ದರು.
ಸ್ಥಳಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.