ಪುತ್ತೂರು: ಜೆಸಿಐ ಪುತ್ತೂರು ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ವರ್ಕರ್’ ವಿಶೇಷ ಕಾರ್ಯಕ್ರಮವೂ ಜು.22 ರಂದು ನಡೆಯಿತು.
ಕೃಷಿ ಕ್ಷೇತ್ರದ ಅಪೂರ್ವ ಸಾಧಕರಾಗಿ ಭೂಮಿ ತಾಯಿಯ ವರಪುತ್ರರಾಗಿ, ಆದರ್ಶ ವ್ಯಕ್ತಿಯಾಗಿ ಬದುಕಿನಲ್ಲಿ ಸಾರ್ಥಕತೆ ಪಡೆದ ಪ್ರಗತಿಪರ ಕೃಷಿಕರಾದ ಸತೀಶ್ ಗೌಡ ಮತ್ತು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಸಮಾಜದಲ್ಲಿ ಓರ್ವ ಉತ್ತಮ ಕಾರ್ಯತತ್ಪರತೆಯುಳ್ಳ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಅಂಚೆ ವಿತರಕಿ ರಮ್ಯ ಬಿ. ಎಸ್ ರವರನ್ನು ಜೆಸಿಐ ಪುತ್ತೂರು ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ವರ್ಕರ್’ ಕಾರ್ಯಕ್ರಮದ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜೆಸಿಐ ಪುತ್ತೂರಿನ ಪೂರ್ವ ಅಧ್ಯಕ್ಷರು ಮತ್ತು ಝೋನ್ xv ನ ಪೂರ್ವ ವಲಯ ಅಧ್ಯಕ್ಷರು ಪ್ರಸ್ತುತ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಪುತ್ತೂರು ಜೆಸಿಐ ಅಧ್ಯಕ್ಷೆ ಜೆಸಿ. ಸ್ವಾತಿ ಜಗನ್ನಾಥ್, ಕಾರ್ಯದರ್ಶಿ ತಿಲಕ್ ರಾಜ್ ಸಿ, ಜೆಸಿಆರ್ ಟಿ ಶಿಲ್ಪಾ ಪಿ. ಶೆಟ್ಟಿ, ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮವನ್ನು ಜೆಸಿ ಜಗನ್ನಾಥ್ ರೈ ಜಿ, ಜೆಸಿ ಶರತ್ ಕುಮಾರ್ ರೈ, ಜೆಸಿ ಧನ್ಯ, ಜೆಸಿ ವಿಷ್ಣುಪ್ರಿಯಾ, ಜೆಸಿ ವಂದನಾ ಶರತ್, ಜೆಸಿ ಪುರುಷೋತ್ತಮ್ ಶೆಟ್ಟಿ ಮತ್ತು ಎಲ್ಲಾ ಪೂರ್ವಧ್ಯಕ್ಷರುಗಳು ಮತ್ತು ಜೆಸಿ ಸದಸ್ಯರು ನೆರವೇರಿಸಿದರು. ಜೆಸಿ ಸೂರಪ್ಪ ಗೌಡ, ಜೆಸಿ ಕುಸುಮ್ ಗೌಡ, ಜೆಸಿ ಗಣೇಶ್, ಜೆಸಿ ಮೋಹನ್ ಎಂ, ಜೆಸಿ ರುಕ್ಮಯ್ಯ ಆತಿಥ್ಯ ನಡೆಸಿದರು.