ಬೆಂಗಳೂರು: ಮೂರು ವರ್ಷದ ಮಗುವೊಂದು ಚಿಕ್ಕ ಗಣೇಶ ಮೂರ್ತಿ ನುಂಗಿದ ಘಟನೆ ನಗರದಲ್ಲಿ ನಡೆದಿದೆ. ಚಿಕ್ಕ ಗಣೇಶ ಮೂರ್ತಿಯ ಜೊತೆ ಆಟವಾಡುತ್ತಿದ್ದ ಮಗು ಮೂರ್ತಿಯನ್ನ ನುಂಗಿಬಿಟ್ಟಿದೆ.
ಈ ಘಟನೆ ಶುಕ್ರವಾರ 8:30 ಕ್ಕೆ ಪೋಷಕರ ಗಮನಕ್ಕೆ ಬಂದಿದೆ.. ಇದರಿಂದ ಪರದಾಡುತ್ತಿದ್ದ ಮಗುವನ್ನ ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಗಂಟೆ ಚಿಕಿತ್ಸೆ ನೀಡಿದ ವೈದ್ಯರು ಯಶಸ್ವಿಯಾಗಿ ಮೂರ್ತಿಯನ್ನ ಹೊರತೆಗೆದಿದ್ದಾರೆ. ಪೋಷಕರ ಸಮಯ ಪ್ರಜ್ಞೆಯಿಂದ ಮಗು ಬದುಕುಳಿದಿದೆ. ವೈದ್ಯ ಶ್ರೀಕಾಂತ್ ಗಣೇಶನನ್ನ ಹೊರತೆಗೆದು ಮಗುವನ್ನ ಉಳಿಸಿದ್ದಾರೆ.
ಮೂರ್ತಿ ಹೊರ ತೆಗೆದಿದ್ದು ಹೇಗೆ..? ವೈದ್ಯರು ಮೊದಲಿಗೆ ಮಗುವಿನ ಮೊದಲ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಗಣೇಶನ ಮೂರ್ತಿ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಮಗುವಿನ ಎಕ್ಸ್ ರೇ ಮಾಡಿಸಿದ್ದ ವೈದ್ಯ ಶ್ರೀಕಾಂತ್.. ಈ ವೇಳೆ ಫುಡ್ ಪೈಪ್ ಬಳಿ ಗಣೇಶ ಮೂರ್ತಿ ಇರೋದನ್ನ ಪತ್ತೆ ಹಚ್ಚಲಾಗಿತ್ತು.. ಮೆಟಲ್ ಆಬ್ಜೆಕ್ಟ್ ಆದ್ದರಿಂದ.. ಎಂಡೋಸ್ಕೋಪಿಕ್ ಮೂಲಕ ತೆಗೆಯಲು ನಿರ್ಧರಿಸಿದ್ರು.. ಸಾಮಾನ್ಯವಾಗಿ ಫುಡ್ ಪೈಪ್ ಬಳಿ ಇದ್ದಾಗ.. ಅದನ್ನ ತೆಗೆಯಲು ರಿಸ್ಕ್ ಆಗ್ತಿತ್ತು ಇದರಿಂದ ಫುಡ್ ಪೈಪ್ ಡ್ಯಾಮೇಜ್ ಆಗ್ತಿತ್ತು ಎನ್ನಲಾಗಿದೆ.
ಹೀಗಾಗಿ ಕೆಲ ಆಬ್ಜೆಕ್ಟ್ ಮೂಲಕ ಅದನ್ನ ಹೊಟ್ಟೆ ಭಾಗಕ್ಕೆ ತಂದು.. ಮಗು ದೇಹ ಉಲ್ಟಾ ಮಾಡಿ ಎಂಡೋಸ್ಕೋಫಿ ಮೂಲಕ ಗಣೇಶನ ಮೂರ್ತಿಯನ್ನ ವೈದ್ಯರು ಹೊರತೆಗೆದಿದ್ದಾರೆ. ಮೂರು ಗಂಟೆಗಳ ಅಬ್ಸರ್ವೇಷನ್ ನಂತರ ಮಗುವನ್ನ ಆಸ್ಪತ್ರೆ ಡಿಸ್ಚಾರ್ಜ್ ಮಾಡಲಾಗಿದೆ.