ಪುತ್ತೂರು: ಶಾಸಕರ ಪ್ರದೇಶಾಭಿವೃಧ್ಧಿ ಯೋಜನೆಯ ಅನುದಾನದಲ್ಲಿ ನಿರ್ಮಿಸಲಾದ ಮುಂಕ್ರುಂಪಾಡಿ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕರಾದ ಸಂಜೀವ ಮಠಂದೂರುರವರು ನೆರವೇರಿಸಿದರು.
ಮಹಿಳೆಯರ ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಸುಸಜ್ಜಿತವಾಗಿ,ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡು ಗ್ರಾಮದ ಅಭಿವೃದ್ಧಿ ತನ್ನ ಕೊಡುಗೆಯನ್ನು ನೀಡುತ್ತಿರುವುದು ಅಭಿನಂದನೀಯ, ನೂತನವಾಗಿ ನಿರ್ಮಿಸಿರುವ ಈ ಅಂಗನವಾಡಿ ಕೇಂದ್ರ ಮಕ್ಕಳ ಚಟುವಟಿಕೆಯ ತಾಣವಾಗಲಿ ಎಂದು ಶುಭ ಹಾರೈಸಿದರು. ನಗರ ಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯಗಳ ಅಭಿವೃಧ್ಧಿಗೆ ನಗರ ಸಭೆಯು ಯೋಜನೆ ರೂಪಿಸಿದ್ದು,ಅನುದಾನದ ಲಭ್ಯತೆಗನುಸಾರ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆಯ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಅತಿಥಿಗಳಾದ ಜೀವಂಧರ ಜೈನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆಯ ಸದಸ್ಯರಾದ ಶ್ರೀಮತಿ ದೀಕ್ಷಾ ಪೈ,ಶ್ರೀಮತಿ ಇಂದಿರಾ,ನಗರ ಸಭೆಯ ಆಯುಕ್ತರಾದ ಮಧು.ಎಸ್.ಮನೋಹರ, ಸಿಡಿಪಿಒ ಶ್ರೀಲತಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.