ಪುತ್ತೂರು: ಪಡ್ನೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಮತ್ತು ಬಿಲ್ಲವ ಗ್ರಾಮ ಸಮಿತಿಯ ಮಹಿಳಾ ಘಟಕದ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಭಾಗವಹಿಸಿ, ಗ್ರಾಮ ಸಮಿತಿಗಳ ಔಚಿತ್ಯವನ್ನು ವಿವರಿಸಿದರು.
ಸಂಘದ ಅಧ್ಯಕ್ಷ ಆರುವಾರಗುತ್ತು ಮನೋಹರ ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಬಿಲ್ಲವ ಮಹಿಳಾ ಘಟಕದ ಉಪಾಧ್ಯಕ್ಷೆ ಸುಜಯಾ ಗಂಗಾಧರ ಕೆಯ್ಯೂರು, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸೇವಾ ಟ್ರಸ್ಟ್‍ನ ಗೌರವಾಧ್ಯಕ್ಷ ಅಣ್ಣಿ ಪೂಜಾರಿ ಆರುವಾರಗುತ್ತು, ಸಾಂತಪ್ಪ ಪೂಜಾರಿ ಅಂಡೆಪುಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಕ್ಷೇತ್ರ ಹಾಗೂ ಸಮಾಜ ಬಾಂಧವರ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಕೊಡಂಗೆಗುತ್ತು ವಾಸು ಪೂಜಾರಿ ದಂಪತಿಗಳನ್ನು ಸನ್ಮಾನಿಸಲಾಯಿತು. ದಾಮೋದರ ಪೂಜಾರಿ ನೆಲಪಾಲ್ ಸನ್ಮಾನಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಪದ್ಮಪ್ಪ ಪೂಜಾರಿ ಮತಾಪು ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಎನ್ ಮೋಹನ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
2021-22ನೇ ಸಾಲಿನ ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿ ಆರುವಾರಗುತ್ತು ಮನೋಹರ ಎ, ಅಧ್ಯಕ್ಷರಾಗಿ ಕೊಡಂಗೆಗುತ್ತು ವಾಸು ಪೂಜಾರಿ, ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ನೆಲಪಾಲು, ಕಾರ್ಯದರ್ಶಿಯಾಗಿ ಪದ್ಮಪ್ಪ ಪೂಜಾರಿ ಮತಾಪು, ಜತೆ ಕಾರ್ಯದರ್ಶಿಯಾಗಿ ರೋಹನ್ ಪೂಜಾರಿ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ವಸಂತ ಪೂಜಾರಿ ದೇಂತಡ್ಕ ಆಯ್ಕೆಯಾದರು.
ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಿಮಲಾ ಸುರೇಶ್ ಪೂಜಾರಿ, ಉಪಾಧ್ಯಕ್ಷೆಯಾಗಿ ವನಿತಾ ಸಾಂತಪ್ಪ ಪೂಜಾರಿ ಅಂಡೆಪುಣಿ, ಕಾರ್ಯದರ್ಶಿಯಾಗಿ ಜಯಶ್ರೀ ವಸಂತ ಪೂಜಾರಿ ದೇಂತಡ್ಕ, ಜತೆ ಕಾರ್ಯದರ್ಶಿಯಾಗಿ ಗೀತಾ ಸುಂದರ ಪೂಜಾರಿ ಅಜಯನಗರ, ಕೋಶಾಧಿಕಾರಿಯಾಗಿ ನಾಗವೇಣಿ ವಾಸು ಪೂಜಾರಿ ಕೊಡಂಗೆಗುತ್ತು ಆಯ್ಕೆಯಾದರು. ಕೋವಿಡ್ ನಿಯಮಾಳಿಗನುಗುಣವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಾವಿನಕಟ್ಟೆ ಶೀನಪ್ಪ ಪೂಜಾರಿ ದಂಪತಿ ಸಹಕಾರದೊಂದಿಗೆ ಭೋಜನ ವ್ಯವಸ್ಥೆ ಆಯೋಜಿಸಲಾಯಿತು.