ನವದೆಹಲಿ: ಭಾರತೀಯ ಕ್ರಿಕೆಟ್ ಟೀಂನ ಆಲ್ರೌಂಡರ್ ಕ್ರುನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಆಗಿದ್ದು ಇಂದು ನಡೆಯಬೇಕಿದ್ದ ಭಾರತ ಶ್ರೀಲಂಕಾ ನಡುವಿನ ಟಿ 20 ಪಂದ್ಯವನ್ನ ಬುಧವಾರಕ್ಕೆ ಪೋಸ್ಟ್ ಪೋನ್ ಮಾಡಲಾಗಿದೆ. ಉಳಿದ ಆಟಗಾರರ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಲ್ಲಷ್ಟೇ ನಾಳೆ ಪಂದ್ಯ ನಡೆಯುವ ಸಾಧ್ಯತೆ ಇದೆ.
ಇನ್ನು ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಎರಡೂ ಟೀಂನ ಆಟಗಾರರನ್ನ ಸದ್ಯ ಐಸೋಲೇಷನ್ಗೆ ಕಳುಹಿಸಲಾಗಿದೆ. ಇದರ ಪರಿಣಾಮ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನ ಇಂಗ್ಲೆಂಡ್ ಜೊತೆಗಿನ ಟೆಸ್ಟ್ ಸಿರೀಸ್ಗೆ ಕಳುಹಿಸುವ ಸಾಧ್ಯತೆಯೂ ಕ್ಷೀಣಿಸಿದೆ ಎನ್ನಲಾಗಿದೆ. ಇವರನ್ನ ವಾಷಿಂಗ್ಟನ್ ಸುಂದರ್, ಶುಭ್ಮನ್ ಗಿಲ್ ಹಾಗೂ ಆವೇಶ್ ಖಾನ್ಗೆ ಪರ್ಯಾಯವಾಗಿ ಕಳುಹಿಸಲು ಬಿಸಿಸಿಐ ಮುಂದಾಗಿತ್ತು. ಶುಭ್ಮನ್ ಗಿಲ್, ಆವೇಶ್ ಖಾನ್ ಇಬ್ಬರೂ ಇಂಜುರಿಗೆ ಒಳಗಾಗಿದ್ದಾರೆ.