ಕಳೆದ ವರ್ಷ ಇದೇ ದಿನಕ್ಕೆ ಕೆಜಿಎಫ್ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿತ್ತು. ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ಬಾಬಾ ಸಂಜಯ್ ದತ್ ಅಧೀರ ಪಾತ್ರದಲ್ಲಿ ನಟಿಸುತ್ತಿರುವುದನ್ನು ಅನೌನ್ಸ್ ಮಾಡಿತ್ತು. ಇಂದು ಅಧೀರ ಪಾತ್ರಧಾರಿಯ ನ್ಯೂ ಲುಕ್ ರಿವೀಲ್ ಮಾಡಲಾಗಿದೆ.ಕಾರಣ ಇಂದು ಮುನ್ನಾಭಾಯಿಯ ಬರ್ತ್ ಡೇ…
62ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಕೆಜಿಎಫ್-2 ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರು ಭಯಂಕರ ಲುಕ್ ರಿಲೀಸ್ ಮಾಡಿದೆ. ಈ ಭಯಾನಕ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸುವಂತಿದೆ. ಖಡ್ಗ ಹಿಡಿದು ಎಂಟ್ರಿ ಕೊಟ್ಟಿರುವ ಅಧೀರ ಸಂಜಯ್ ದತ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪೋಸ್ಟರ್ ರಿಲೀಸ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, “ಯುದ್ಧವು ಪ್ರಗತಿಗಾಗಿ ಆಗಿದೆ. ಇದನ್ನು ರಣಹದ್ದುಗಳು ಸಹ ನನ್ನೊಂದಿಗೆ ಅಪ್ಪುತ್ತವೆ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಅಧೀರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನು ಸಂಜಯ್ ದತ್ ಅವರ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ವರ್ಷ ಬಹುಭಾಷೆಯಲ್ಲಿ ತೆರೆ ಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಂಗದೂರು ಅವರು ಬಹುಕೋಟಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
"War is meant for progress, even the vultures will agree with me" – #Adheera, Happy Birthday @duttsanjay sir.#KGFChapter2 @TheNameIsYash @VKiragandur @hombalefilms @TandonRaveena @SrinidhiShetty7 @excelmovies @VaaraahiCC @PrithvirajProd @DreamWarriorpic @LahariMusic pic.twitter.com/VqsuMXe6rT
— Prashanth Neel (@prashanth_neel) July 29, 2021