ಬಂಟ್ವಾಳ: ಸಮಾಜದ ಒಳಿತಿಗಾಗಿ ದುಡಿದ, ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಅನುಸಾರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಯುವವಾಹಿನಿಯು ರಾಜ್ಯದ್ಯಂತ 34 ಘಟಕಗಳನ್ನು ಹೊಂದಿದ್ದು, 35ನೇ ಘಟಕವಾಗಿ ವಿಟ್ಲ ಯುವವಾಹಿನಿ ಸೇರ್ಪಡೆಯಾಗಿದೆ ಇದರ ಸಾರಥ್ಯವನ್ನು ಉದ್ಯಮಿ ಯಶವಂತ ಪೂಜಾರಿ ನಿರ್ವಹಿಸಲಿದ್ದಾರೆ.
ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಯುವವಾಹಿನಿ (ರಿ) ಎಲ್ಲೆಡೆ ಮೆಚ್ಚುಗೆ ಪಾತ್ರವಾಗಿರುವ ಸಂಘಟನೆಯಾಗಿದೆ.