ಮಂಗಳೂರು: ಅಂಬ್ಲಮೊಗರು ಗ್ರಾಮ ಪಂಚಾಯತ್ ನ ಗ್ರಾಮ ಸಹಾಯಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಜು.29 ರ ಬೆಳಗ್ಗೆ ನಡೆದಿದೆ. ಅಂಬ್ಲಮೊಗರು ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದವರು. ನಿತಿನ್ ಮೃತದೇಹ ಮನೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಂದು ಬೆಳಗ್ಗೆ ಪತ್ನಿಯನ್ನು ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಯಲ್ಲಿ ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ತಾಯಿ ರೂಮಿನೊಳಗೆ ತೆರಳಿದಾಗ ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ.
ಮೃತ ನಿತಿನ್ ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಅಂಬ್ಲಮೊಗರು ಪಂಚಾಯಿತಿನಲ್ಲಿ ನಿತಿನ್ ಅವರ ಚಿಕ್ಕಪ್ಪ ಗ್ರಾಮಸಹಾಯಕರಾಗಿದ್ದು, ಅವರ ಅಗಲುವಿಕೆಯ ಬಳಿಕ ನಿತಿನ್ ಅವರಿಗೆ ಕೆಲಸ ದೊರೆತಿತ್ತು. ಎರಡು ವರ್ಷಗಳ ಹಿಂದೆ ನಿತಿನ್ ಅವರ ತಂದೆ ದಯಾನಂದ ಶೆಟ್ಟಿ ಅವರು ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದರು.
ನಿತಿನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.