ಐಟಿ ಕಂಪನಿ ಕಾಗ್ನಿಜೆಂಟ್ (cognizant) ಈ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಶೇ. 41.8 ರಷ್ಟು ಹೆಚ್ಚಳಗೊಂಡಿದ್ದು, ಈ ಹೆಚ್ಚಳದ ಜೊತೆ ಕಂಪನಿ ಒಟ್ಟು ಆದಾಯ 51.2 ಕೋಟಿ ಯುಎಸ್ ಡಾಲರ್ ಅಂದ್ರೆ ಸುಮಾರು 3,801.7 ಕೋಟಿ ರೂಪಾಯಿಯಾಗಿದೆ.
ಕಾಗ್ನಿಜೆಂಟ್ ತನ್ನ ಆದಾಯದ ಬೆಳವಣಿಗೆಯ ಗುರಿಯನ್ನು ಎಫ್‌ವೈ 21ಕ್ಕೆ ಶೇ 10.2-11.2 ಕ್ಕೆ ಹೆಚ್ಚಿಸಿದೆ. ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇ. 14.6 ರಷ್ಟು ಏರಿಕೆಯಾಗಿ 4.6 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಈ ಅಂಕಿ ಅಂಶವು ಕಂಪನಿಯ ಮುನ್ಸೂಚನೆಗಿಂತ ಹೆಚ್ಚಾಗಿದೆ.
ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ಪ್ರಕಾರ, 2021ರಲ್ಲಿ ಕಂಪನಿ ಸುಮಾರು 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಿದೆ. 1 ಲಕ್ಷ ಎಸೋಸಿಯೇಟ್ಸ್ ಗೆ ತರಬೇತಿ ನೀಡಲಿದೆ. ಕಾಗ್ನಿಜೆಂಟ್ 2021 ರಲ್ಲಿ ಸುಮಾರು 30,000 ಪದವೀಧರರಿಗೆ ಮತ್ತು 2022ರಲ್ಲಿ 45,000 ಫ್ರೆಶರ್ಸ್ ಗೆ ಕೆಲಸ ನೀಡಲಿದೆ ಎಂದಿದ್ದಾರೆ.