ಬೆಳ್ತಂಗಡಿ: ಸೇವಾಭಾರತಿ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದೊರೆತ ರೆಟ್ರೋ ಫಿಟ್ಟೆಡ್ ಸ್ಕೂಟರ್ ಅನ್ನ್ನು ಸೇವಾಧಾಮ ಬೆನ್ನು ಮೂಳೆ ಮುರಿತಗೊಂಡವರ ಪುನಶ್ಚೇತನ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದರು.

ಕೇಂದ್ರದಲ್ಲಿ ಅದರ ಸದ್ಬಳಕೆ ಪರಿಣಾಮಕಾರಿಯಾಗಿ ಆಗಲಿದೆ ಎನ್ನುವ ದೂರದೃಷ್ಟಿಯಿಂದ ಮತ್ತು ದಿವ್ಯಾಂಗರ ಬಾಳಲ್ಲಿ ನವಚೈತನ್ಯ ತುಂಬಲಿ ಎನ್ನುವ ಸದಾಶಯದೊಂದಿಗೆ ಸೇವಾಧಾಮದ ಸಂಚಾಲಕರಾದ ಕೆ. ಪುರಂದರ್ ರಾವ್ ರವರ ಮೂಲಕ ಸೇವಾಧಾಮಕ್ಕೆ ಹಸ್ತಾಂತರಿಸಿದ್ದಾಗಿ ಹೇಳಿದರು. ಈ ಸಂದರ್ಭದಲ್ಲಿ ಪುನಶ್ಚೇತನ ಕೇಂದ್ರದ ಶಿಬಿರಾರ್ಥಿಗಳು, ಪೋಷಕರು, ಹಿತೈಷಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.