ಪುತ್ತೂರು: ದರ್ಬೆತಡ್ಕ ಶಾಲೆಯ ಸಮೀಪ ದಲಿತ ಕುಟುಂಬವೊಂದು ಸರಕಾರಿ ಜಾಗದಲ್ಲಿದ್ದಾರೆಂದು ದೂರಿನ ಮೇರೆಗೆ ಕಂದಾಯ ಇಲಾಖೆ ಮನೆಯನ್ನು ತೆರವುಗೊಳಿಸಿದ್ದು, ಮನೆ ಕಳೆದು ಕೊಂಡ ದಲಿತ ಕುಟುಂಬದ ಆಧಾರಸ್ಥಂಭವಾಗಿದ್ದ ರಘುನಾಥ ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ಕುರಿತು ಹೊಸ ಆಯಾಮವೊಂದು ಸೃಷ್ಟಿಯಾಗಿ ಮನೆ ತೆರವು ಕಾರ್ಯದಲ್ಲಿ ಶಾಸಕರ ಹೆಸರು ಬರುವಂತಹ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಆದರೇ ಇದೀಗ ಈ ವಿಷಯಕ್ಕೆ ಹೊಸ ತಿರುವು ದೊರಕಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಘುನಾಥ್ ರವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾನು ಆಡಿಯೋ ರೆಕಾರ್ಡ್ ಮಾಡೇ ಇಲ್ಲ, ನನ್ನ ಬಳಿ ಇರುವುದು ಬೇಸಿಕ್ ಮೊಬೈಲ್ ಫೋನ್ ಅದರಲ್ಲಿ ಆಡಿಯೋ ರೆಕಾರ್ಡ್ ಮಾಡಲು ಹೇಗೆ ಸಾಧ್ಯ..? ಆಡಿಯೋ ವೈರಲ್ ಮಾಡಿ ರಾಜಕೀಯ ಮಾಡ್ಬೇಡಿ, ಶಾಸಕರ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ರಘುನಾಥ್ ರವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಆಪತ್ಬಾಂಧವ ಟ್ರಸ್ಟ್ ನ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ, ‘ಈ ವಿಚಾರದಲ್ಲಿ ರಾಜಕೀಯ ಸಲ್ಲದು, ರಘುನಾಥ್ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಅಸಾಧ್ಯ ಎಂದಿದ್ದಾರೆ.