ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ‘ವಿದ್ಯಾಮಾತ ಅಕಾಡೆಮಿ’ ವತಿಯಿಂದ ನಡೆಯುತ್ತಿದ್ದ ಕರ್ನಾಟಕ ಪೊಲೀಸ್ ನೇಮಕಾತಿ 2021ಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್, ಕಾನ್ ಸ್ಟೇಬಲ್ ಹುದ್ದೆಗಳಿಗೆ ಬೇಕಾಗುವ ದೈಹಿಕ ಕ್ಷಮತೆಯ ಮೈದಾನ ತರಬೇತಿಯು ಜು.31 ರಂದು ಸಮಾರೋಪಗೊಂಡಿತು. ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಕಳೆದ ಒಂದು ತಿಂಗಳಿಂದ ತರಬೇತಿ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಸಂಪ್ಯ ಪೊಲೀಸ್ ಠಾಣೆಯ ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀಕಾಂತ್ ರಾಥೋಡ್ ಶಿಬಿರಾರ್ಥಿಗಳಿಗೆ ಪೊಲೀಸ್ ನೇಮಕಾತಿಯ ದೈಹಿಕ ಕ್ಷಮತೆಯ ಬಗ್ಗೆ ಮಾಹಿತಿಯನ್ನು ನೀಡಿ ಶುಭಹಾರೈಸಿದರು.
ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶಿಧರ್ ರಾವ್ ಬೊಳಿಕ್ಕಲ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎ.ಕೆ. ಜಯರಾಮ ರೈ, ವಿದ್ಯಾಮಾತ ಅಕಾಡೆಮಿಯ ಈ ಒಳ್ಳೆಯ ಸಮಾಜಮುಖಿ ಕೆಲಸವನ್ನು ಶ್ಲಾಘಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ತರಬೇತುದಾರರಾದ ಸಂತೋಷ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಮಾತ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈಯವರು ದೈಹಿಕ ಕ್ಷಮತೆಯ ಶಿಬಿರದಲ್ಲಿ ಉತ್ತಮ ಸಾಧನೆ ತೋರಿರುವ ಶಿಬಿರಾರ್ಥಿಗಳನ್ನು ಸನ್ಮಾನಿಸಿ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಮುಂದಿನ ದಿನಗಳಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆಗೆ ಅವಶ್ಯವಿರುವ 2ನೇ ಕಾರ್ಯಾಗಾರವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಪ್ಯ ಪೊಲೀಸ್ ಠಾಣೆಯ ಉಪ ಆರಕ್ಷಕ ನಿರೀಕ್ಷಕರಾದ ನಾರಾಯಣ ಗೌಡ ರವರು , ಸಿಬ್ಬಂದಿ ಹರ್ಷಿತ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಮುಖ್ಯೋಪಾಧ್ಯಾಯರಾದ ವಿನೋದ್ ಕುಮಾರ್ ರವರು ಉಪಸ್ಥಿತರಿದ್ದರು. ವಿದ್ಯಾಮಾತ ಅಕಾಡೆಮಿಯ ಸಹನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಅತಿಥಿಗಳನ್ನು ಮತ್ತು ಶಿಬಿರಾರ್ಥಿಗಳನ್ನು ಅಭಿನಂದಿಸಿದರು.