ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾಗಿ ಹರೀಶ್ ನಿಡ್ಪಳ್ಳಿ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಮೋಹನ ಗುರ್ಜಿನಡ್ಕ ನೇಮಕಗೊಂಡಿದ್ದಾರೆ.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರ ಶಿಫಾರಸ್ಸಿನಂತೆ ಹರೀಶ್ ನಿಡ್ಪಳ್ಳಿ ಮತ್ತು ಶಕುಂತಳಾ ಶೆಟ್ಟಿ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ರವರ ಶಿಫಾರಸ್ಸಿನಂತೆ ಮೋಹನ್ ಗುರ್ಜಿನಡ್ಕರವರ ನೇಮಕಾತಿ ನಡೆದಿದೆ.
ಹರೀಶ್ ನಿಡ್ಪಳ್ಳಿರವರು ಯುವ ಕಾಂಗ್ರೆಸ್, ಬಿಲ್ಲವ ಸಮಿತಿ ಸಹಿತ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೋಹನ್ ಗುರ್ಜಿನಡ್ಕ ಇಡ್ಕಿದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದು ಕಬಕ ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಲ್ಲವ ಸಂಘ ಸಹಿತ ವಿವಿಧ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.