ಉಡುಪಿ: ಮಲ್ಪೆ ಕಡಲು ತೀರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಇಂದು ಪತ್ತೆಯಾಗಿದೆ.ಕೊಡುಗು ಮೂಲದ ದೇಚ್ಚಮ್ಮ ಸಾವಿಗೀಡಾದ ಯುವತಿಯಾಗಿದ್ದು, ಮೈಸೂರಿನ ಸ್ನೇಹಿತನೊಂದಿಗೆ ಕೊಡಗು ಮೂಲದ ಮೂವರು ಯುವತಿಯರು ಉಡುಪಿಗೆ ಪ್ರವಾಸಕ್ಕೆ ಆಗಮಿಸಿದ್ದರು.
ನಿನ್ನೆ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್ಗಳ ಸೂಚನೆ ಲೆಕ್ಕಿಸದೇ ಅಲೆಗಳ ಜೊತೆಗೆ ಆಟವಾಡಲು ನಾಲ್ವರು ನೀರಿಗೆ ಇಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ದೇಚಮ್ಮ ಮಾತ್ರ ನೀರಿನಲ್ಲಿ ನಾಪತ್ತೆಯಾಗಿದ್ದರು. ಇಂದು ಯುವತಿಯ ಮೃತದೇಹ ಮಲ್ಪೆ ಬೀಚ್ನ ಸೀವಾಕ್ ಬಳಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.