ಬೆಂಗಳೂರು: ರಾಜ್ಯ ಸಚಿವ ಸಂಪುಟ ಸದಸ್ಯರ ಪಟ್ಟಿ ಬಹುತೇಕ ಫೈನಲ್ ಆಗಿದೆ. ಕಳೆದ 3 ದಿನಗಳಿಂದ ದೆಹಲಿಯಲ್ಲಿರುವ ಸಿಎಂ ಪಟ್ಟಿ ಫೈನಲ್ ಮಾಡಿಸಿಕೊಂಡಿದ್ದಾರೆ. ಆದ್ರೂ ಕೂಡ ಇಂದು ಸಂಜೆಯ ಹೈಕಮಾಂಡ್ ಸಭೆಯ ಬಳಿಕ ಪಟ್ಟಿಯನ್ನು ವರಿಷ್ಠರೇ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಬಾರಿ ಪ್ರಾದೇಶಿಕ, ಸಾಮಾಜಿಕ ಸಮತೋಲನದ ಸಂಪುಟಕ್ಕೆ ಒತ್ತು ನೀಡಲಾಗಿದೆ.
ಪ್ರಾದೇಶಿಕ, ಸಾಮಾಜಿಕ ಸಮತೋಲನದ ಸಂಪುಟ ರಚನೆ
ಕಡೆಗೂ ರಾಜ್ಯ ಸಚಿವ ಸಂಪುಟದ ಕಸರತ್ತು ಅಂತಿಮ ಘಟ್ಟ ತಲುಪಿದೆ. ಕಳೆದ 3 ದಿನಗಳಿಂದ ಎದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಮ್ಯಾರಾಥಾನ್ ಸಭೆಗಳ ಮೂಲಕ ಕ್ಯಾಬಿನೆಟ್ ಪಟ್ಟಿಯನ್ನು ಫೈನಲ್ ಮಾಡಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮನೆಯಲ್ಲಿ ಮಹತ್ವದ ಸಭೆ ನಡೆದಿದೆ. ಜೆ ಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ಈ ವೇಳೆ ಸಿಎಂ ವರಿಷ್ಠರಿಗೆ 2 ರಿಂದ 3 ಪಟ್ಟಿಯನ್ನು ನೀಡಿದ್ದು, ಅದರಲ್ಲಿ ಅಳೆದು ತೂಗಿ ಹೊಸ ಪಟ್ಟಿಯನ್ನು ಹೈಕಮಾಂಡ್ ರೆಡಿ ಮಾಡಿಕೊಂಡಿದೆ. ಇಂದು ಸಂಸತ್ ಕಲಾಪದ ಬಳಿಕ ಬಿಜೆಪಿ ವರಿಷ್ಠರು ಮಹತ್ವದ ಸಭೆ ನಡೆಸಿ ಸಂಪುಟ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಹೀಗಂತ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಬಾರಿಯ ಸಚಿವ ಸಂಪುಟ ಪ್ರಾದೇಶಿಕ, ಸಾಮಾಜಿಕ ಸಮತೋಲನದ ಸಂಪುಟ ಆಗಿರಲಿದೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಿಸಿಎಂ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ತಾರೆ ಎಂದಿದ್ದಾರೆ.