ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ ಚಾಲನೆ ನೀಡಿದ್ದಾರೆ.
ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್ ನೆಟ್ ಸಂಪರ್ಕ ಇಲ್ಲದೇ ಹಣವನ್ನು ಕಳುಹಿಸಬಹುದಾದ ಸೇವೆಗೆ ಮೋದಿ ಚಾಲನೆ ನೀಡಿದರು.

ಏನಿದು ‘ಈ-ರುಪಿ’
‘ಇ-ರುಪಿ’ ಎಂಬುದು ಡಿಜಿಟಲ್ ಪಾವತಿ ವ್ಯವಸ್ಥೆ, ಆರೋಗ್ಯ, ಸರ್ಕಾರಿ ಸೇವೆಗಳನ್ನು ಫಲಾನುಭವಿಗಳಿಗೆ ಇ-ವೋಚರ ಮೂಲಕ ನೀಡಲಾಗುತ್ತದೆ. ಉದಾ: ಯಾವುದಾದರೂ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯನ್ನುಫಲಾನುಭವಿ ಪಡೆಯಬೇಕಿದ್ದರೆ ಆತನು ಎಸ್ಸೆಮ್ಮೆಸ್ ತನಗೆ ಸರ್ಕಾರ ಮೂಲಕ ನೀಡಿರುವ ಆಸ್ಪತ್ರೆಯಲ್ಲಿ ತೋರಿಸ ಬಹುದು. ಆಗ ಆಸ್ಪತ್ರೆಗೆ ಇ-ನಗದು ಸಂದಾ ಯವಾಗಿ, ಆತ ಚಿಕಿತ್ಸೆ ಪಡೆಯಬಹುದು. ಇದಕ್ಕೆ ಯಾವುದೇ ಆ್ಯಪ್, ಡಿಜಿಟಲ್ ಸಂಪರ್ಕ ಅಗತ್ಯ ಇಲ್ಲ, ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಬೇಕಿಲ್ಲ. ಕೇವಲ ಎಸೆಮೆಸ್‌ನಲ್ಲಿನ ಇ-ವೋಟು ಸಾಕು. ಸ್ಮಾರ್ಟ್‌ಫೋನ್ ಇದವರು ಕ್ಯುಆರ್ ಕೋಡ್ ಬಳಸಿ ಈ ಸೇವೆ ಪಡೆಯಬಹುದು.
ವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಅಲ್ಲ
ಸರ್ಕಾರ ಬಿಡುಗಡೆ ಮಾಡಿರುವ ಹೊಸ ಇ-ರುಪಿ ಪಾವತಿ ವ್ಯವಸ್ಥೆ ವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಅಲ್ಲ. ಇದು ನಿರ್ದಿಷ್ಟ ಯೋಜನೆ ಅಥವಾ ನಿರ್ದಿಷ್ಟ ಉದ್ದೇಶದ ಹಣ ಪಾವತಿಗೆ ಸಂಬಂಧಿಸಿದ್ದು. ಇಲ್ಲಿ ಯಾವುದೇ ಮಧ್ಯವರ್ತಿಯ ಹಂಗಿಲ್ಲದೆ ನೇರ, ತ್ವರಿತ ಹಣ ಪಾವತಿ ಸಾಧ್ಯ. ಮುಖ್ಯವಾಗಿ ಇಂಟರ್ನೆಟ್ ಇಲ್ಲದ ಮತ್ತು ಹಳೆಯ ಕಾಲದ ಫೀಚರ್ ಫೋನ್ ಬಳಸಿಯೂ ಸರ್ಕಾರದ ನೂರಾರು ಯೋಜನೆಗಳ ಲಾಭ ಪಡೆದುಕೊಳ್ಳಬಹುದು ಎಂಬುದೇ ಯೋಜನೆಯ ಮತ್ತೊಂದು ಪ್ರಮುಖ ಹೆಗ್ಗಳಿಕೆ. ಸರ್ಕಾರ ಈಗಾಗಲೇ 300ಕ್ಕೂ ಹೆಚ್ಚು ಯೋಜನೆಗಳಿಗೆ ನೇರ ನಗದು ಹಣ ವರ್ಗಾವಣೆ ಮಾಡುತ್ತಿದೆ. ಆ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಯೋಜನೆ ನೆರವು ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.