ಆಲಂಕಾರು: ಆಲಂಕಾರು ಗ್ರಾಮದ ಬೇರಿಕೆ ಮಧ್ವಕುಟೀರದ ಜ್ಯೋತಿಷಿಗಳಾದ ರಾಮಮೂರ್ತಿ ಆಚಾರ್ (74.ವ) ರವರು ಮೆದುಳು ರಕ್ತಸ್ರಾವ ಹಾಗೂ ಕೋವಿಡ್ ಉಲ್ಬಣಗೊಂಡು ಆ.4 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.

ಮೃತರು ಆಲಂಕಾರು ಗ್ರಾ.ಪಂ ಅಧ್ಯಕ್ಷರಾಗಿ , ಮಂಡಲ ಪಂಚಾಯತ್ ಸದಸ್ಯರಾಗಿ, ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ 28 ವರ್ಷಕ್ಕೂ ಮೇಲ್ಪಟ್ಟು ಸೇವೆಸಲ್ಲಿಸಿದ್ದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ, ಶ್ರೀ ದುರ್ಗಾಂಬಾ ಕಲಾ ಸಂಗಮದ ಸ್ಥಾಪಕ ಸದಸ್ಯರಾಗಿ, ಹಿರಿಯ ಅರ್ಥದಾರಿಯಾಗಿ, ರಜತ ಮಹೋತ್ಸವ ಸಮಿತಿಯ ಅದ್ಯಕ್ಷರಾಗಿ, ಶಿವಳ್ಳಿ ಸಂಪದ ರಾಮಕುಂಜ ವಲಯದ ಪದಾಧಿಕಾರಿಯಾಗಿ, ಪ್ರಖ್ಯಾತ ಜ್ಯೋತಿಷಿಯಾಗಿ ವಿವಿಧ ಕಡೆ ದೈವ-ದೇವಸ್ಥಾನದಲ್ಲಿ ಮಾರ್ಗದರ್ಶಕರಾಗಿ, ಪ್ರಗತಿಪರ ಕೃಷಿಕರಾಗಿ, ಧಾರ್ಮಿಕ ನೇತಾರರಾಗಿ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ನಾಗರತ್ನಾರವರನ್ನು ಅಗಲಿದ್ದಾರೆ.