ಸುಳ್ಯ :ಸಾಮಾಜಿಕ ಧುರೀಣರು ಹಾಗೂ ದಲಿತ ನಾಯಕರಾದ ನಂದರಾಜ್ ಸಂಕೇಶರವರ ಧರ್ಮಪತ್ನಿ ಕುಸುಮರವರು ಇಂದು ಸಂಜೆ ದಿಢೀರನೆ ಆರೋಗ್ಯದಲ್ಲಿ ಏರುಪೇರು ಸಂಭವಿಸಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಕುಸುಮರವರು 15 ವರ್ಷಗಳ ಹಿಂದೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಾಲ್ಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಂದರಾಜ್ ರವರು ಕಾಂಗ್ರೆಸ್ ನಾಯಕರಾಗಿದ್ದು, ಸುಳ್ಯದ ತಾ.ಪಂ.ಕಚೇರಿ ವಾಣಿಜ್ಯ ಸಂಕೀರ್ಣದಲ್ಲಿ ಸೇವಾ ಕೇಂದ್ರ ನಡೆಸುತ್ತಿದ್ದರು. ಕುಸುಮರವರು ಕೂಡ ಈ ಕೇಂದ್ರದಲ್ಲಿದ್ದು ಪತಿಗೆ ನೆರವಾಗುತ್ತಿದ್ದರು.
ಇಂದು ಅಪರಾಹ್ನ ಮನೆಯಲ್ಲಿರುವ ವೇಳೆ ಕುಸುಮರವರಿಗೆ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿದ್ದ ಪುತ್ರಿ ಫೋನ್ ಮಾಡಿದ ಕೂಡಲೆ ನಂದರಾಜರು ಅಂಗಡಿಯಿಂದ ಮನೆಗೆ ಧಾವಿಸಿ ಪತ್ನಿಯನ್ನು ಕೆ.ವಿ.ಜಿ.ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗೆ ಕುಸುಮ ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.
ಬಳಿಕ ಅವರ ಪಾರ್ಥಿವ ಶರೀರವನ್ನು ಕುಕ್ಕುಜಡ್ಕದ ಸಂಕೇಶ ಮನೆಗೆ ಕೊಂಡೊಯ್ಯಲಾಗಿದೆ.
ಮೃತರು ಪತಿ, ಮೂವರು ಪುತ್ರಿಯರು,ಅಳಿಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.