ಪುತ್ತೂರು : ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ತರಬೇತಿ ಪಡೆದುಕೊಂಡು ಇದೀಗ ಪುತ್ತೂರಿನಲ್ಲಿ ಎರಡು ಬ್ಯೂಟಿ ಪಾರ್ಲರ್ ಸಂಸ್ಥೆಗಳನ್ನು ನಡೆಸುತ್ತಿರುವ ಮಾಧವಿ ರೈ ಅವರು ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಕೊಡಮಾಡುವ ಸೌತ್ ಇಂಡಿಯನ್ ವಿಮೆನ್ಸ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು
ಇವರು ರುಡ್ ಸೆಟ್ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬ್ಯೂಟೀಶಿಯನ್ ತರಬೇತಿಯಲ್ಲೂ ನೈಪುಣ್ಯತೆ ಪಡೆದು, ಡಿ. 21ರಂದು ಚೆನ್ನೈನಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು