ಕರ್ನಾಟಕ ಪೊಲೀಸ್ ಇಲಾಖೆಯ 2021 ರ ಸಾಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಗೆ ಅರ್ಜಿ ಸಲ್ಲಿಸಿ ದೈಹಿಕ ಕ್ಷಮತೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ವಿದ್ಯಾಮಾತ ಅಕಾಡೆಮಿಯ ವತಿಯಿಂದ ಒಂದು ತಿಂಗಳ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.
ಆಸಕ್ತರು ಈ ಕೆಳಗಿನ ವಿಚಾಗಳನ್ನು ಗಮನಿಸಿ:
- ತರಗತಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 09ರಿಂದ ಮಧ್ಯಾಹ್ನ 01ರವರೆಗೆ ನಡೆಯುತ್ತದೆ.
- ಯಾವುದೇ ತಾಲ್ಲೂಕಿನ/ಜಿಲ್ಲೆಯವರು ಮುಕ್ತವಾಗಿ ತರಗತಿಗಳ ಪ್ರಯೋಜನ ಪಡೆದುಕೊಳ್ಳಬಹುದು.
- ಭಾಷಾಂತರ+ಪ್ರಬಂಧ ರಚನೆ+ಸಂಕ್ಷಿಪ್ತ ಬರವಣಿಗೆಯ ವಿಶೇಷ ತರಬೇತಿ ಆಯೋಜಿಸಲಾಗುತ್ತದೆ.
- ದಿನಂಪ್ರತಿ ಪ್ರತಿ ಗಂಟೆಗೊಂದರಂತೆ ನಿತ್ಯ 4 ತರಗತಿಗಳು ನಡೆಯುತ್ತವೆ. ಇದರಲ್ಲಿ ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ, ಪ್ರಚಲಿತ ಘಟನೆ ವಿಷಯಗಳು ಒಳಗೊಂಡಿರುತ್ತವೆ. ತರಗತಿಗೆ ಹಾಜರಾಗುವವರಿಗೆ ಹೆಚ್ಚಿನ ಅಧ್ಯಯನಕ್ಕೆ ಸಹಕರಿಯಾಗಲು ಸಾಯಂಕಾಲ 6ರಿಂದ 08ರವರೆಗೆ ಆನ್ಲೈನ್ ತರಬೇತಿ ಕೂಡ ನೀಡಲಾಗುತ್ತದೆ.
- ವಾರಾಂತ್ಯದಲ್ಲಿ ಪ್ರಚಲಿತ ಘಟನೆಗಳ ಗುಂಪು ಚರ್ಚೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರಗಳು, ಪ್ರಾಯೋಗಿಕ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
- ಸದ್ಯ ಪದವಿ /ಪದವಿ ಪೂರ್ವ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳು ಮುಂದೆ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಪೂರ್ವತಯಾರಿ ನಡೆಸುವ ಉದ್ದೇಶ ಹೊಂದಿದ್ದಲ್ಲಿ ಖುದ್ದಾಗಿ ಬಂದು ಮನವಿ ಸಲ್ಲಿಸಿದ್ದಲ್ಲಿ ಕೆಲವು ಮಾನದಂಡಗಳ ಆಧಾರದಲ್ಲಿ ತರಬೇತಿಗೆ ಪರಿಗಣಿಸಲಾಗುವುದು.
ತರಬೇತಿಯಲ್ಲಿ ಪಾಲ್ಗೊಳ್ಳುವವರು ವಿದ್ಯಾಮಾತ ಅಕಾಡೆಮಿಗೆ ಖುದ್ದಾಗಿ ದಿನಾಂಕ 12-08-2021 ರ ಒಳಗಾಗಿ ಬಂದು ಹೆಸರನ್ನು ನೋಂದಾಯಿಸಬೇಕು. ಬೇಕಾಗಿರುವ ದಾಖಲಾತಿಗಳು-ಒಂದು ಪಾಸ್ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್.
ತರಬೇತಿ ನೀಡುವ ಸಂಸ್ಥೆಯ ವಿಳಾಸ: ವಿದ್ಯಾಮಾತ ಅಕಾಡೆಮಿ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ. 1 ನೇ ಮಹಡಿ, ಹಿಂದುಸ್ತಾನ್ ಕಾಂಪ್ಲೆಕ್ಸ್, ಎ.ಪಿ.ಯಂ.ಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು (ದ.ಕ) . ಫೋನ್:8590773486 ಸಂಪರ್ಕಿಸಬಹುದಾಗಿದೆ.