ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಒತ್ತೆಮುಂಡೂರು ಸಮೀಪದ ಕೋವಿಡ್ ಸೋಂಕಿತ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಒತ್ತೆಮುಂಡೂರು ಸಮೀಪದ ನಿವಾಸಿ ವೃತ್ತಿಯಲ್ಲಿ ಚಾಲಕರಾಗಿರುವ ವ್ಯಕ್ತಿಯೋರ್ವರು ಆ.7ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು ಆ.9ರಂದು ಅವರ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಈ ಬಗ್ಗೆ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ನರಿಮೊಗರು ಗ್ರಾ.ಪಂಗೆ ಮಾಹಿತಿ ನೀಡಿದ್ದರು.
ಪಿಡಿಓ ನಿರ್ಲಕ್ಷ್ಯ ಆರೋಪ
ಕೊರೋನಾ ಸೋಂಕಿತ ವ್ಯಕ್ತಿ ನಾಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದೂ ನರಿಮೊಗರು ಗ್ರಾ.ಪಂ ಪಿಡಿಓ ಅವರು ಸಕಾಲದಲ್ಲಿ ಪೊಲೀಸ್ ಠಾಣೆಗೆ ದೂರು ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
























