ಹಾಸನ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಯಿ ಹಾಗೂ ಮಗ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್.ಹೇಮಂತ್ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂದಹಾಗೇ ತೀರ್ಥ ಅವರು ಎಂಟನೇ ತರಗತಿ ಓದುತ್ತಿರುವಾಗ ಅರ್ಧಕ್ಕೆ ಶಾಲೆ ಬಿಟ್ಟಿದ್ದರು. ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಅವರು ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದರು. ಇನ್ನು ವಳಲಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಿ.ಆರ್.ಹೇಮಂತ್ ಪರೀಕ್ಷೆ ಬರೆದಿದ್ದರು. ಹೇಮಂತ್ 562 ಅಂಕ ಪಡೆದುಕೊಂಡಿದ್ದರೆ, ತಾಯಿ ತೀರ್ಥ ಅವರು 235 ಅಂಕ ಪಡೆದು ಉತೀರ್ಣರಾಗಿದ್ದಾರೆ.