ಪುತ್ತೂರು: ಇಲ್ಲಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟ ಪ್ರಗತಿ ಸ್ಟಡಿ ಸೆಂಟರ್ ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರುಷದ
ಎಸ್.ಎಸ್.ಎಲ್.ಸಿ ಮಿಷನ್ 100 ರಲ್ಲಿ ತರಬೇತಿ ತರಗತಿಗೆ ಶೇಕಡಾ 100% ರಷ್ಟು ಫಲಿತಾಂಶ ಲಭಿಸಿರುತ್ತದೆ. ಪರೀಕ್ಷೆಗೆ ಹಾಜರಾದ ರೇಗ್ಯುಲರ್ 58 ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣಗೊಂಡಿದ್ದ 52 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಮಹಮ್ಮದ್ ಶಬೀರ್(517), ಲಿಖಿತ್ (501), ಶ್ರೀಕೌಶಿಕ್ (475), ರೀಹಾಮ್ (465), ಚಿಂತನಾ (464) ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದಾರೆ.
ರೇಗ್ಯುಲರ್ 58 ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿ 28, ದ್ವಿತೀಯ ಶ್ರೇಣಿ 26, ತೃತೀಯ ಶ್ರೇಣಿಯಲ್ಲಿ 4 ಉತ್ತೀರ್ಣ ಹೊಂದಿದ್ದಾರೆ. ಕೋರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳು ನಡೆಸಿ,
ವಿದ್ಯಾರ್ಥಿಗಳ ಕಲಿಕೆಗೆ ಬಹಳ ತೊಂದರೆಯಾಗಿತ್ತು. ಅಂತಹ ಸಂದರ್ಭದಲ್ಲಿ ಕೊರೋನಾವನ್ನು ಲೆಕ್ಕಿಸದೇ ಆಫ್‌ಲೈನ್ ತರಗತಿ ನಡೆಸಿ, ವಿದ್ಯಾರ್ಥಿಗಳಿಗೆ ಬ್ಯಾಚ್ ಮಾದರಿ ಪ್ರತಿ ವಿಷಯಕ್ಕೆ ೨ ಪರೀಕ್ಷೆಗಳನ್ನು ನಡೆಸಿ, ಶೇಡಿಂಗ್
ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಪರೀಕ್ಷೆಗೆ ತಯಾರಿ ನಡೆಸಲಾಗಿತ್ತು.
ಅನುತ್ತೀರ್ಣ ವಿದ್ಯಾರ್ಥಿಗಳ ಸಾರಥಿ:
ಅನುತ್ತೀರ್ಣಗೊಂಡು ಮರುಪರೀಕ್ಷೆಗೆ ಕುಳಿತಿದ್ದ ಅನೇಕ ವಿದ್ಯಾರ್ಥಿಗಳಿಗೆ ಯಾವುದೇ ಬ್ಯಾಚ್ ಮಾದರಿ ಪರೀಕ್ಷೆಯ ಮಾಹಿತಿ ಇರದ ಸಮಯದಲ್ಲಿ ಸೋತ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಆಫ್‌ಲೈನ್ ದೈನಂದಿನ
ತರಗತಿ ಮಾಡಿ, ಪರೀಕ್ಷೆಗೆ ತಯಾರಿ ಮಾಡಿ ಉತ್ತಮ ಅಂಕಗಳನ್ನು ಪಡೆಯಲು ಪ್ರಗತಿ ಸಂಸ್ಥೆ ಸಾರಥಿಯಾಗಿ ನಮ್ಮೊಂದಿಗೆ ನಿಂತಿತ್ತು ಎಂದು ಉತ್ತೀರ್ಣಗೊಂಡ ವಿದ್ಯಾರ್ಥಿ ಕಿರಣ್ ರವರು ವ್ಯಕ್ತಪಡಿಸಿದರು.
ಪ್ರತಿ ಬಾರಿಗಿಂತ ವಿಭಿನ್ನವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ಕರೆ ಮಾಡಿ ಆಫ್‌ಲೈನ್ ತರಗತಿಗಳನ್ನು ನಡೆಸಿ ಎಂದು ಮನವಿ ಮಾಡಿದಾಗ ಮನವಿಗೆ ಸ್ಪಂದಿಸಿ, ದೈನಂದಿನ ತರಗತಿಯಂತೆ ನಡೆಸಿ,
ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಸಂತಸ ತಂದಿದೆ, ಉತ್ತೀರ್ಣರಾದ ಎಲ್ಲಾ ವಿದ್ಯಾಥಿಗಳಿಗೆ ಶುಭಹಾರೈಸಿ, ಸಹಕಾರ ನೀಡಿದ ಎಲ್ಲಾ ಉಪನ್ಯಾಸಕರ ವೃಂದದವರಿಗೆ
ಧನ್ಯವಾದ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‌ನಾಥ್ ವ್ಯಕ್ತಪಡಿಸಿದರು.
ಅನುತ್ತೀರ್ಣಗೊಂಡು ಎಸ್.ಎಸ್.ಎಲ್.ಸಿ ಪಾಸಾಗಿ 2022 ವರ್ಷಕ್ಕೆ 17 ವರ್ಷ ತುಂಬುವ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ಪಿಯುಸಿ ಮಾಡಬಹುದು. ಹಾಗೂ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯ ಎಲ್ಲಾ ವಿಭಾಗಕ್ಕೂ ಟ್ಯೂಷನ್ ನೀಡಲಾಗುವುದು ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಭೇಟಿ ನೀಡಬಹುದು ಅಥವಾ 9900109490 ಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.