ವಿಟ್ಲ: ಕೈಂತಿಲ ತಿಮ್ಮಪ್ಪ ಗೌಡರ ಪತ್ನಿ ಯಶೋಧ (47 ) ರವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆ.9 ರಂದು ನಿಧನರಾಗಿದ್ದಾರೆ.
ಅನಾರೋಗ್ಯಕ್ಕೊಳಗಾದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೇ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಕೋವಿಡ್ ವರದಿ ಪಾಸಿಟಿವ್ ಬಂದ ಕಾರಣ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಾಮವಳಿ ಪ್ರಕಾರ ನೆರವೇರಿಸಲಾಯಿತು.
ಮೃತರು ಪತಿ, ಮಕ್ಕಳಾದ ರಶ್ಮಿತಾ, ಮಿಥುನ್, ತಂದೆ ಬೆಳ್ಳಿಪ್ಪಾಡಿ ಕಂಬಳದಡ್ಡ ಶೀನಪ್ಪ ಗೌಡ, ಸಹೋದರರಾದ ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಗೌಡ, ಬಜರಂಗದಳದ ಮುಖಂಡ ಸೇಸಪ್ಪಗೌಡ, ಸಹೋದರಿ ನೋಣಮ್ಮ ಅವರನ್ನು ಅಗಲಿದ್ದಾರೆ.