ಪುತ್ತೂರು: ಮುಂಡೂರು ಮೂರನೇ ವಾರ್ಡ್ ನ ಕಾಂಗ್ರೆಸ್ ಸಭೆಯು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯಂ.ಬಿ ವಿಶ್ವನಾಥ ರೈ ಯವರ ನೇತೃತ್ವದಲ್ಲಿ ಆ.15 ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಬೂತ್ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಪದ್ಮಯ್ಯ ನಾಯ್ಕ್ ಬಂಡಿಕಾನ, ಉಪಾಧ್ಯಕ್ಷರಾಗಿ ಕಾವ್ಯ ಸತೀಶ್ ಪಜಿಮಣ್ಣು, ಕಾರ್ಯದರ್ಶಿಯಾಗಿ ಸುಂದರ ಪೂಜಾರಿ ಮತ್ತು ರವಿ ಕುಮಾರ್ ನಡಾಜೆ ಆಯ್ಕೆಗೊಂಡರು. ಮುಂಡೂರು ವಲಯ ಉಸ್ತುವಾರಿ ಯಾಕುಬ್ ಮುಲರ್ ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
