ಕಲಬುರಗಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದ ಬೆನ್ನಲ್ಲೇ ತಾಲಿಬಾನ್ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್ ಕೆಂಡಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಯು.ಟಿ ಖಾದರ್, ತಾಲಿಬಾನ್ ನಮ್ಮ ತತ್ವ ಆದರ್ಶಗಳಿಗೆ ವಿರುದ್ಧ ಸಂಸ್ಕೃತಿ ಹೊಂದಿದೆ ಎಂದರು.
ಭಾರತ ಪಕ್ಕದಲ್ಲೇ ಅಫ್ಘಾನಿಸ್ತಾನ ಇರೋದರಿಂದ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕು. ನಾವು ಷರಿಯಾ ಕಾನೂನು ಆಡಳಿತ ಸಹಿಸೋಕೆ ಆಗುವುದಿಲ್ಲ ಎಂದು ಖಾದರ್ ಆಕ್ರೋಶ ಹೊರಹಾಕಿದರು.
ಯಾವು ಧರ್ಮವೂ ಷರಿಯಾ ಕಾನೂನು ಆಚರಣೆ ಮಾಡಿ ಎಂದು ಹೇಳುವುದಿಲ್ಲ. ಎಲ್ಲಾ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕಿ ಎಂದು ಹೇಳುತ್ತವೆ. ಯಾರು ತಾಲಿಬಾನ್ ಬೆಂಬಲಿಸುತ್ತಾರೋ ಅವರು ನೈಜ ಭಾರತೀಯ, ನೈಜ ಮುಸ್ಲಿಂ ಆಗೋದಕ್ಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದರು.