ಪುತ್ತೂರು: ಕಟ್ಟಡದ ದುರಸ್ಥಿಯ ವೇಳೆ ಕಾರ್ಮಿಕರಿಗೆ ಹತ್ತಲು ಅಳವಡಿಸಲಾದ ಸ್ಟಾಂಡ್ ಗೆ ರಸ್ತೆ ಬದಿಯಲ್ಲಿರುವ ವಿದ್ಯುತ್ ತಂತಿಗೆ ಸ್ಪರ್ಶಗೊಂಡು ಬೆಂಕಿ ಕಾಣಿಸಿಕೊಂಡ ಘಟನೆ ಪುತ್ತೂರಿನ ಎಂ.ಟಿ ರಸ್ತೆಯಲ್ಲಿ ಆ.19 ರಂದು ನಡೆದಿದೆ. ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಊಟಕ್ಕೆ ತೆರಳಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕಾರ್ಮಿಕರು ಸ್ಟ್ಯಾಂಡ್ ಬಳಸಿಕೊಂಡು ಕೆಲಸ ನಿರ್ವಹಿಸುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದು, ಮಧ್ಯಾಹ್ನ ಕಾರ್ಮಿಕರು ಊಟಕ್ಕೆ ಹೋದ ವೇಳೆ ಜೋರಾಗಿ ಬೀಸಿದ ಗಾಳಿಗೆ ಸ್ಟ್ಯಾಂಡ್ ಪಕ್ಕದಲ್ಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಎರಗಿತ್ತು. ಈ ವೇಳೆ ಬೆಂಕಿಯೊಂದು ಕ್ಷಣಾರ್ಧದಲ್ಲಿ ಕಾಣಿಸಿ ನಿಂತು ಹೋಗಿದೆ.
