ಪುತ್ತೂರು: ಕೆದಂಬಾಡಿ ಗ್ರಾಮದ ಬೂತ್ ಸಂಖ್ಯೆ 2 ರ ಕಾರ್ಯಕರ್ತರ ಸಭೆಯು ಅಬ್ದುಲ್ಲ ಹಾಜಿ ಯವರ ಮನೆಯಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಯವರು, ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಂಕಲ್ಪವನ್ನು ಬ್ಲಾಕ್ ಕಾಂಗ್ರೆಸ್ ಮಾಡಿದ್ದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು.

ಕಾರ್ಯಕರ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಸಮಸ್ಯೆಗಳನ್ನು ನಿವಾರಿಸಿ, ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಪ್ರಯತ್ನದಲ್ಲಿ ತೊಡಗಿದ್ದೇವೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಕಾರಾತ್ಮಕವಾಗಿ ಸ್ಪಂದಿಸಿ ಬ್ಲಾಕ್ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸಬೇಕೆಂದು ಹೇಳಿದರು. ಮುಂದಿನ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಗ್ರಾಮ ಸಮಿತಿಗಳ ಮುಖ್ಯಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಗೆದ್ದು ಜನರ ಸೇವೆ ಮಾಡುವ ಅವಕಾಶವನ್ನು ಪಡೆಯ ಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ, ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಯಾವುದೇ ರೀತಿಯ ಲೋಪವನ್ನು ಮಾಡದೆ ಸಮಗ್ರವಾಗಿ ಪಕ್ಷವನ್ನು ಕಟ್ಟುವ ಪ್ರಯತ್ನವನ್ನು ಮಾಡುವುದಾಗಿ ಘೋಷಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಳ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ದುರಾಡಳಿತವನ್ನು ನೀಡುತ್ತಿರುವ ಬಿಜೆಪಿ ನೇತೃತ್ವದ ಸರಕಾರಗಳ ಬಗ್ಗೆ ದೇಶದ ಜನತೆ ರೋಸಿ ಹೋಗಿದ್ದಾರೆ, ಸಂಘಟಿತ ಪ್ರಯತ್ನಗಳ ಮೂಲಕ ಮುಂದುವರಿದಾಗ ಮುಂದಿನ ಚುನಾವಣೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ, ಬೆಲೆಯೇರಿಕೆ, ಕೋಮುವಾದ ಮತ್ತು ನಿರುದ್ಯೋಗದಿಂದ ದೇಶ ತತ್ತರಿಸಿದೆ. ಇದೆಲ್ಲವನ್ನು ಮುಂದಿಟ್ಟು ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ಕೆದಂಬಾಡಿ ಬೂತ್ 2ರ ಬೂತ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ತಾರಾನಾಥ ರೈ, ಉಪಾಧ್ಯಕ್ಷರಾಗಿ ಶರೀಫ್ ಗಟ್ಟೆಮನೆ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಗಂಗಾಧರ ರೈ ಕುಯ್ಯಾರು, ಇಸ್ಮಾಯಿಲ್ ಗಟ್ಟಮನೆ, ಝಕರಿಯ ಇದ್ಪಾಡಿ, ಇಬ್ರಾಹಿಂ ಕುಯ್ಯಾರು , ಇಕ್ಬಾಲ್ ಸಾರೆಪುಣಿ, ನಾರಾಯಣ ಪಾಟಾಳಿ, ಹಮೀದ್ ಸನ್ಯಾಸಿಗುಡ್ಡೆ , ಇಬ್ರಾಹಿಂ ಬಾತಿಷ, ಮುಸ್ತಾಫಾ ಜಿ. ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಕೆ.ಎ. ಆಲಿ, ಮನೋಹರ ರೈ ಎಂಡೆಸಾಗು, ಕಾರ್ಯದರ್ಶಿ ಹಬೀಬ್ ಕಣ್ಣೂರು ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೆರಾ, ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ, ಕೆ.ಆಸ್ಮಾ, ಮಾಜೀ ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಆಸ್ಮ ಗಟ್ಟಮನೆ , ಕಾರ್ಯಕರ್ತರಾದ ಇಕ್ಬಾಲ್ ಎಚ್.ಪಿ. ಅಶಿತೇಶ್ ಸಾರೆಪುಣಿ, ಹಮೀದ್ , ರಿಯಾಝ್ ಗಟ್ಟಮನೆ, ಉಸ್ಮಾನ್ ಸಾರೆಪುಣಿ, ನವಾಝ್ ಸಾರೆಪುಣಿ , ಹ ಮೀದ್ ಸನ್ಯಾಸಿಗುಡ್ಡೆ, ಮಹಮ್ಮದ್ ಸೈಫುದ್ಧೀನ್ , ಮಹಮ್ಮದ್ ಸರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಅಶ್ರಫ್ ಸಾರೆಪುಣಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು , ನೂತನ ಪ್ರ.ಕಾರ್ಯದರ್ಶಿ ತಾರನಾಥ್ ರೈ ವಂದಿಸಿದರು.
