ರಾಧಾಕೃಷ್ಣರ ರೂಪ ಎಲ್ಲರ ಕಣ್ಣ ಮುಂದೆ ಇವತ್ತಿಗೂ ಹಾದುಹೋಗುತ್ತದೆ. ವೈವಿಧ್ಯಮಯ ರೂಪದಲ್ಲಿ ರಾಧಾಕೃಷ್ಣರ ರೂಪ ವಿಭಿನ್ನವಾಗಿರುತ್ತದೆ. ಅಂತೆಯೇ ಇಲ್ಲಿ ಸಹೋದರ ಸಹೋದರಿಯೇ ರಾಧಾಕೃಷ್ಣರಾಗಿದ್ದಾರೆ. ರಾಧಾಕೃಷ್ಣರ ಈ ವಿಭಿನ್ನ ಗೆಟಪ್ ಎಲ್ಲರನ್ನೂ ಕಣ್ಮನಸೆಳೆಯುವಂತಿದೆ.


ಈ ಕೃಷ್ಣ ಜನ್ಮಾಷ್ಟಮಿಗೆ ಸಿಂಪಲ್ ರಾಧಾಕೃಷ್ಣರ ಲುಕ್ ಡಿಫರೆಂಟ್ ಆಗಿ ಮೂಡಿಬಂದಿದೆ. ಎಲ್ಲೆಡೆ ರಾಧಾಕೃಷ್ಣ ಅಂದಾಕ್ಷಣ ಇವತ್ತಿನ ಧಾರಾವಾಹಿಗಳಲ್ಲಿ ತೋರಿಸುವಂಥೆ ಸಂಪೂರ್ಣ ವಿಜೃಂಭಿತ ರಾಧಾಕೃಷ್ಣರೇ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ರಾಧಾಕೃಷ್ಣರು ಸರಳವಾಗಿ ವಿಭಿನ್ನ ಉಡುಗೆಯಿಂದ ಗಮನಸೆಳೆಯುತ್ತಿದ್ದಾರೆ.

ಬಂಗಾಡಿಯ ಜಲಪಾತವೊಂದರ ಬಳಿ ನೀರೂ ನಾಚುವಂತೆ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಬೆಳ್ತಂಗಡಿಯ ಪ್ರತಿಭಾನ್ವಿತ ಛಾಯಾಗ್ರಾಹಕ ಸುಗುಣೇಂದ್ರ ಅವರ ‘ಸುಗ್ಗು ಫೋಟೋಗ್ರಫಿ’ ಕೈಚಳಕದಲ್ಲಿ, ಕಲಾವಿದ ಶರೂನ್ ನಾಯರ್ ಹಾಗೂ ದೀಕ್ಷಿತ್ ಸಹಕಾರದೊಂದಿಗೆ ಮೂಡಿಬಂದಿದೆ ಈ ರಾಧಾಕೃಷ್ಣ ರೂಪಗಳು.


ಉಜಿರೆಯ ದಿವ್ಯಾ ಪಾರ್ಲರ್ ನ ದಿವ್ಯಾ ರಾಜೇಶ್ ಅವರ ಮೇಕ್ ಓವರ್, ದೀನು ಟೈಲರ್ ಸಂತೆಕಟ್ಟೆ ಇವರ ಡಿಸೈನಿಂಗ್, ಹೊಳ್ಳ ಆರ್ಟ್ಸ್ ಉಜಿರೆ ಕಾಸ್ಟ್ಯೂಮ್ ವಿನ್ಯಾಸಗೊಳಿಸಿದ್ದು, ಖ್ಯಾತ ನಿರೂಪಕಿ ‘ಪ್ರಜ್ಞಾ ಓಡಿಲ್ನಾಳ ಹಾಗೂ ಅವರ ಸಹೋದರ ಪ್ರಜ್ವಲ್ ಓಡಿಲ್ನಾಳ’ ರಾಧಾಕೃಷ್ಣರಾಗಿ ಕಂಗೊಳಿಸಿದ್ದು, ದ್ವಾಪರಯುಗದಲ್ಲಿನ ರಾಧಾಕೃಷ್ಣರೇ ಧರೆಗಿಳಿದು ಬಂದಂತಿದೆ.

ನೀರಿನ ಬಳಿ ತೆಗೆದ ಫೋಟೋ ಶ್ರೀ ಕೃಷ್ಣ ಹಾಗೂ ರಾಧೆಯ ಬಳಿ ಹಾಲುಕ್ಕುವಂತಹ ಐತಿಹಾಸಿಕ ಚಿತ್ರಣವನ್ನು ಸೃಜನಾತ್ಮಕವಾಗಿ ಕಟ್ಟಿಕೊಟ್ಟಂತಿದೆ. ಜೋಕಾಲಿ, ನೀರಾಟ, ವಿಭಿನ್ನ ಭಂಗಿಗಳು ರಾಧಾಕೃಷ್ಣರ ನೈಜತೆಯನ್ನು ತೋರಿಸುವಂತಿದೆ.

ಸುಗ್ಗು ಬೆಳ್ತಂಗಡಿ ಕಂಡಿರುವ ಅಪ್ರತಿಮ ಛಾಯಾಗ್ರಾಹಕ. ಈಗಾಗಲೇ ನವರಾತ್ರಿ, ಶಿವರಾತ್ರಿ ಸಮಯದಲ್ಲಿ ಸಾಕಷ್ಟು ಸಾಂದರ್ಭಿಕ ಫೋಟೋ ಕ್ಲಿಕ್ಕಿಸುವ ಮೂಲಕ ಹೆಸರುವಾಸಿಯಾಗಿದ್ಧು ಈ ಬಾರಿ ರಾಧಾಕೃಷ್ಣರ ವಿಶೇಷ ಕಾನ್ಸೆಪ್ಟ್ ಮಾಡಿ ಸದ್ದು ಮಾಡುತ್ತಿದ್ದಾರೆ. ಈ ಫೋಟೋ ಸದ್ಯ ಎಲ್ಲಾ ಕಡೆ ವೈರಲ್ ಆಗುತ್ತಿದೆ.























ಛಾಯಾಗ್ರಾಹಕ ಸುಗುಣೇಂದ್ರ

ಶರೂನ್ ನಾಯರ್

ದೀಕ್ಷಿತ್

































