ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ಕ್ಕೆ ಕ್ರೀಡಾ ಸಾಮಾಗ್ರಿಗಳ ನೀಡಿಕೆಗೆ ಕಾರಣರಾದ ಜಿಲ್ಲಾ ಪಂಚಾಯತ್ ಸದಸ್ಯರು, ಸಂಘದ ಮತ್ತು ಕ್ರೀಡಾಭಿಮಾನಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಶ್ರೀಮತಿ ಮಂಜುಳಾ ಮಾವೆ ಯವರ ಶಿಫಾರಸ್ಸಿನಂತೆ ನೀಡಲಾಗಿರುವ ಕ್ರೀಡಾ ಸಾಮಾಗ್ರಿಗಳಲ್ಲಿ ಬ್ಯಾಟ್,ಬಾಲ್,ತ್ರೋಬಾಲ್,ವಾಲಿಬಾಲ್,ಬಾಸ್ಕೆೇಟ್ ಬಾಲ್,ಪುಟ್ ಬಾಲ್,ಕೈ ಕವಚ ಸೇರಿದಂತೆ ಹತ್ತು ಹಲವು ಸಾಮಾಗ್ರಿಗಳು ಸೇರಿವೆ. ಅನಂತಾಡಿ ಗ್ರಾಮಕ್ಕೆ ಭೇಟಿ ಮಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆಯವರು ಅನಂತಾಡಿ ಗ್ರಾಮ ಪಂಚಾಯತ್ ಸಂಭಾಂಗಣದಲ್ಲಿ ಈ ಕ್ರೀಡಾ ಸಾಮಾಗ್ರಿಗಳನ್ನು ನವ ಭಾರತ್ ಯುವಕ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಗಣೇಶ ಪೂಜಾರಿ,ಪಂಚಾಯತ್ ಸದಸ್ಯೆ ಶ್ರೀಮತಿ ಮಮಿತ ,ಪಿಡಿಓ ಜಯರಾಮ್ ಕೆ,ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ,ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ಗೀತಾ,ಗ್ರಾಮದ ಸಂಘಟನೆಯ ಪ್ರಮುಖರು ,ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ನವ ಭಾರತ್ ಯುವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
