ಕಾರ್ಕಳ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ಪಾಲಟ್ಟದಲ್ಲಿ ನಡೆದಿದೆ.
ಮೃತ ಯುವಕನನ್ನು ಅನೀಶ್ ಎನ್ನಲಾಗಿದೆ. ಈತ ಮೈಟೆಕ್ ಐಟಿಐನಲ್ಲಿ ಅಟೋಮೊಬೈಲ್ ಕೋರ್ಸ್ ನ ವಿದ್ಯಾರ್ಥಿಯಾಗಿದ್ದನು. ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ ಅನೀಶ್ ಜೊತೆ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಫೋನ್ ಮಾಡಿದರೂ ತೆಗೆಯದ ಕಾರಣ ಕೂಡಲೇ ಮನೆಗೆ ಹೋಗಿ ಬೆಡ್‌ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್‌ಹುಕ್‌ಗೆ ಶಾಲಿನಿಂದ ನೇಣು ಬಿಗಿದುಕೊಂಡಿದ್ದನು.
ಈ ವೇಳೆ ಬೆಡ್‌ರೂಮಿನ ಬಾಗಿಲು ಒಡೆದು ಅನೀಶ್‌ನನ್ನು ಬೈಲೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನು ಅನೀಶ್‌ನು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅನೀಶ್ ತಂದೆ ಸದಾಶಿವ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.