ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಇನ್ ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರ್ ಅನ್ನು ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು ರವರು ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ರವರಿಗೆ ಆ.೩೧ ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ಎಲ್ಲಾ ದಿನಗಳಲ್ಲಿ ಎಲ್ಲಾ ಘಟಕಗಳಲ್ಲಿ ಕಾಗದ ಮುಕ್ತ ಆಗಿ ಕಾರ್ಯ ನಿರ್ವಹಿಸುವಂತೆ ಘಟಕದ ಎಲ್ಲಾ ಮಾಹಿತಿಯನ್ನು ಕಂಪ್ಯೂಟರೀಕರಣಗೊಳಿಸಿ ಕೆಲಸ ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನೀತಾ. ಟಿ.ಎಸ್,ಉಪ್ಪಿನಂಗಡಿ ಗೃಹರಕ್ಷಕರಾದ ಎ.ಎಸ್.ಎಲ್.ಜನಾರ್ದನ ಆಚಾರ್ಯ, ಸೋಮನಾಥ್, ನಿಖೀಲ್, ಸಮದ್,ಜಿಲ್ಲಾ ಕಮಾಡೆಂಟ್ ರವರ ಜೀಪು ಚಾಲಕ ದಿವಾಕರ್,ದುಷ್ಯಂತ್,ಸುನಿಲ್, ಸುನಿಲ್ ಪೂಜಾರಿ, ಶುಭ ಕುಲಾಲ್, ಜಯಶ್ರೀ ಉಪಸ್ಥಿತರಿದ್ದರು.