ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ರೇಶ್ಮಾ ಎಂಬಾಕೆ ನಗರದ ಬಲ್ಲಾಳ್‌ಭಾಗ್‌ನಿಂದ ನಾಪತ್ತೆಯಾಗಿ ಇತ್ತೀಚೆಗೆ ಅಕ್ರಂ ಎಂಬಾತನನ್ನು ಮದುವೆಯಾಗಿದ್ದು, ಇದೀಗ ತನಿಖೆ ನಡೆಸಿದ ಬರ್ಕೆ ಠಾಣಾ ಪೊಲೀಸರು ನವ ದಂಪತಿಯನ್ನು ಬಂಧಿಸಿದ್ದಾರೆ.

ಹಜರತ್ ಅಲಿಯಾಸ್ ಯಶೋಧಾಳ ಮಗಳು ರೇಷ್ಮಾ ಗದಗಿನ ಯಶೋಧಾಳ ಅಕ್ಕನ ಮಗ ಅಕ್ರಂನನ್ನು ಮದುವೆಯಾಗಿದ್ದಳು. ಇದಕ್ಕೂ ಮುನ್ನ ರೇಶ್ಮಾಳನ್ನು ಯಶೋಧ ಕುಟುಂಬಿಕರು ಹಿಂದೂ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಬಳಿಕ ನಿಶ್ಚಿತಾರ್ಥದ ಚಿನ್ನದ ಒಡವೆಗಳು, ಪೋಷಕರ 90 ಸಾವಿರ ನಗದು ಹಣದೊಂದಿಗೆ ರೇಶ್ಮಾ ಪರಾರಿಯಾಗಿದ್ದಳು. ಅಲ್ಲದೆ ರೇಶ್ಮಾ ವಿರುದ್ಧ ಬರ್ಕೆ ಠಾಣೆಗೆ ಪೋಷಕರು ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.
ರೇಶ್ಮಾ ತಾಯಿ ಯಶೋದಾ ಮೂಲತಃ ಮುಸ್ಲಿಂ ಕುಟುಂಬದ ಹೆಣ್ಣಾಗಿದ್ದು, 22 ವರ್ಷಗಳ ಹಿಂದೆ ಹಿಂದು ಯುವಕನನ್ನು ಮದುವೆಯಾಗಿ ಮಂಗಳೂರಿಗೆ ಬಂದು ನೆಲೆಸಿದ್ದರು. ಇದೀಗ 22 ವರ್ಷಗಳ ಬಳಿಕ ಯಶೋದಾಳ ಪುತ್ರಿ ರೇಶ್ಮಾಳನ್ನು ಆಕೆಯ ಅಕ್ಕನ ಮಗ ಅಕ್ರಂಗೆ ಅವರು ಮದುವೆ ಮಾಡಿಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ರೇಶ್ಮಾ ವಿರುದ್ಧ ಚಿನ್ನಾಭರಣವನ್ನು ಕಳವು ಮಾಡಿದ ಹಾಗೂ ನಗದು ಹಣವನ್ನು ಪೋಷಕರಿಗೆ ಗೊತ್ತಿಲ್ಲದಂತೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.