ನವದೆಹಲಿ: ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ‘ಏರ್ ಇಂಡಿಯಾ’ ಟಾಟಾ ಗ್ರೂಪ್ ಪಾಲಾಗಿದೆ. 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನ ಖರೀದಿಸುವಲ್ಲಿ ಯಶಸ್ವಿಯಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕೃತ ಮೂಲಗಳ ಪ್ರಕಾರ, ಏರ್ ಇಂಡಿಯಾ ಮಾರಾಟಕ್ಕಾಗಿ ಮಾಡಿದ ಎರಡು ಬಿಡ್‌ಗಳಲ್ಲಿ ಟಾಟಾ ಸಮೂಹವು ಗೆದ್ದಿದೆ. ಜೊತೆಗೆ ಟಾಟ್ ಗ್ರೂಪ್ಗೆ ಏರ್ ಇಂಡಿಯಾ ನೀಡಲು ಸರ್ಕಾರ ಒಪ್ಪಿಕೊಂಡಿದೆ ಅಂತಾ ವರದಿಯಾಗಿದೆ. ಸ್ಪೈಸ್ ಜೆಟ್ ಪ್ರಮೋಟರ್ ಅಜಯ್ ಸಿಂಗ್ ಕೂಡ ಈ ಬಿಡ್ನಲ್ಲಿ ಭಾಗಿಯಾಗಿದ್ದರು.
1932ರಲ್ಲಿ ಏರ್ ಇಂಡಿಯಾವನ್ನು ಸ್ಥಾಪನೆ ಮಾಡಲಾಗಿತ್ತು. 1953ರಲ್ಲಿ ಕೇಂದ್ರ ಸರ್ಕಾರ ಏರ್ ಇಂಡಿಯಾ ಸಂಸ್ಥೆಯನ್ನ ರಾಷ್ಟ್ರೀಕರಣಗೊಳಿಸಿತು. 2019 ಫೆಬ್ರವರಿಯಲ್ಲಿ ಏರ್ ಇಂಡಿಯಾ ಮಾರಾಟ ಮಾಡುವ ಬಗ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು.