ಪುತ್ತೂರು: ದೇಲಂಪಾಡಿ ಗ್ರಾಮದ ಮಂದಬೆಟ್ಟು ನಿವಾಸಿ ಉದಯ ನಾಯ್ಕ್(55) ಅಲ್ಪಕಾಲದ ಅಸೌಖ್ಯದಿಂದಾಗಿ ಅ.5 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉದಯ ನಾಯ್ಕ್ ರವರು ಪಂಚೋಡಿಯ ಸಂತೋಷ್ ವೈನ್ಸ್ ನಲ್ಲಿ ಮತ್ತು ಹಾರಾಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಎರಡು ಪುತ್ರಿಯರನ್ನು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.


























