ನವದೆಹಲಿ: ಮಧ್ಯಪ್ರದೇಶದ ಇಂದೋರ್ ಪೊಲೀಸರು ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಮಾಡಿದ್ದಾರೆ. ಬಾಂಗ್ಲಾ ದೇಶದಿಂದ ಯುವತಿಯರನ್ನು ತಂದು ಬಿಡುತ್ತಿದ್ದ ಮುನೀರ್ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಭಯಾನಕ ಸಂಗತಿಗಳು ಹೊರ ಬಂದಿವೆ.
ಮುನೀರ್ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 75 ಮದುವೆಯಾಗಿದ್ದ. ಮದುವೆ ಹೆಸರಿನಲ್ಲಿ ಯುವತಿಯನ್ನ ಕರೆದುಕೊಂಡು ಬಂದು ಕರಾಳ ದಂಧೆಗೆ ತಳ್ಳುತ್ತಿದ್ದ. ಅದರಂತೆ ಬಾಂಗ್ಲಾದೇಶದಿಂದ ಬರೋಬ್ಬರಿ 75 ಯುವತಿಯನ್ನ ಮದುವೆಯಾಗಿ, ಇಲ್ಲಿಗೆ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ದೂಡಿದ್ದ ಎನ್ನಲಾಗಿದೆ.
ಜೊತೆಗೆ ಈತ ಪ್ರತೀ ತಿಂಗಳು 55 ಯುವತಿಯನ್ನ ವೇಶ್ಯಾವಾಟಿಕೆ ದಂಧೆಗೆ ದೂಡಲು ಟಾರ್ಗೆಟ್ ಮಾಡಿಕೊಂಡಿದ್ದ. ಕಳೆದ 5 ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ಮೂಲಕ ಹಣದ ಸುಲಿಗೆಗೆ ಇಳಿದಿದ್ದ. ಬಾಂಗ್ಲದೇಶದಿಂದ ಕರೆದುಕೊಂಡು ಬಂದ ಯುವತಿಯನ್ನ ಮುಂಬೈ, ಕೋಲ್ಕತ್ತ ಸೇರಿದಂತೆ ಇತರೆ ಕಡೆ ಅವರನ್ನ ಬಿಟ್ಟು ಟ್ರೈನಿಂಗ್ ಕೊಡಿಸುತ್ತಿದ್ದ ಎನ್ನಲಾಗಿದೆ.
ಪೊಲೀಸರು 22 ಯುವತಿಯರನ್ನ ರಕ್ಷಣೆ ಮಾಡಿದ್ದಾರೆ. ಇನ್ನು ದಾಳಿಯ ವೇಳೆ ಬಂಧಿತನಾದ ಆರೋಪಿ ತಾನು ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಂದು ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.