ಸುಳ್ಯ : ಶಾಸಕ ಅಂಗಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಸುಳ್ಯದ ಶ್ರೀ ರಾಮಪೇಟೆಯಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರನ ಆಚರಿಸಲಾಯಿತು.ವಿಜಯೋತ್ಸವ ಸಭೆಯಲ್ಲಿ ಮಾತನಾಡಿದ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಚ ಹರೀಶ್ ಕಂಜಿಪಿಲಿ ಮಾತನಾಡಿಶಾಸಕರು ಸಚಿವರಾದ ಮೇಲೆ ನಮ್ಮ ಜವಾಬ್ದಾರಿ ಹೆಚ್ಚಿದೆ.ಅಂಗಾರರು ನಮ್ಮ ಶಾಸಕರಾಗಿದ್ದರೂ ಅವರು ಇನ್ನು ಮುಂದೆ ರಾಜ್ಯಕ್ಕೆ ಮಂತ್ರಿ .ಈ ಹಿನ್ನಲೆಯಲ್ಲಿ ತಮ್ಮ ತಮ್ಮ ಗ್ರಾಮಗಳಲ್ಲಿ ಆಗಬೇಕಾಗಿರುವ ಕೆಲಸಗಳ ಗಮನ ಹರಿಸಬೇಕು .ಅವರು ಸಚಿವರಾಗಿ ಬರುವ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಆಶಾತಿಮ್ಮಪ್ಪ,ಚಂದ್ರಕೋಲ್ಚಾರ್ ಶಿವಾನಂದ ಕುಕ್ಕುಂಬಳ ಇತರರು ಉಪಸ್ಥಿತರಿದ್ದರು.
