ಪುತ್ತೂರು: ಕರ್ನಾಟಕ ಸಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಆ. 10 ಹಾಗೂ 11 ರಂದು ಬೆಂಗಳೂರಿನ ವಿಜಯನಗರ ಅಕ್ವೆಟಿಕ್ ಸೆಂಟರ್ ನಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಈಜು ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್ (PAC) ನ ಪಾರ್ಥ ವಾರಣಾಶಿ ಮತ್ತು ನಿರೂಪ್ ಜಿ.ಆರ್ ಹಲವು ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.
ನಿರೂಪ್ ಜಿ ಆರ್ 50 ಮೀ ಬ್ಯಾಕ್ ಸ್ಟೋಕ್ಸ್, 100 ಮೀ ಬ್ರೆಸ್ಟ್ ಸ್ಟೋಕ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 100 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸಿದರೇ, ಪಾರ್ಥ ವಾರಣಸಿಯವರು 50 ಮೀ ಬಟರ್ ಫ್ಲೈ, 50 ಮೀ ಬ್ಯಾಕ್ ಸ್ಟ್ರೋಕ್ , 50 ಮೀ ಫ್ರೀಸ್ಟೈಲ್, 100 ಮೀ ಫ್ರೀಸ್ಟೈಲ್ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಇವರಿಬ್ಬರು ಪುತ್ತೂರಿನ ಬಾಲವನದ ಪುತ್ತೂರು ಅಕ್ವಟಿಕ್ ಕ್ಲಬ್‌ನ್ನು ಪ್ರತಿನಿಧಿಸಿದ್ದರು.ಪಾರ್ಥ ವಾರಣಾಸಿ ಹಾಗೂ ನಿರೂಪ್ ಜಿ ಆರ್ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಈಜು ಪಟುಗಳಿಗೆ ತರಬೇತುದಾರರಾಗಿದ್ದಾರೆ.ಹಲವಾರು ಈಜುಗಾರರಿಗೆ ತರಬೇತಿ ನೀಡಿದ್ದಾರೆ. ದಕ್ಷಿಣ ಕೊರಿಯದಲ್ಲಿ 2019ರಲ್ಲಿ ನಡೆದ FINA ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಕೋಚ್ ಆಗಿ ಪಾರ್ಥ ವಾರಣಸಿಯವರು ಕಾರ್ಯನಿರ್ವಹಿಸಿದ್ದರು.