ಪುತ್ತೂರು: ತಾಲೂಕಿನ ಉಪ್ಪಿನಂಗಡಿಯ ಕದಿಕ್ಕಾರು ಎಂಬಲ್ಲಿ ಸುಮಾರು 50 ವರ್ಷ ಕ್ಕಿಂತಲೂ ಮೇಲ್ಪಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ಸುಮಾರು 18 ಪರಿಶಿಷ್ಟಜಾತಿಯ ಕುಟುಂಬಗಳು ವಾಸಿಸುತ್ತಿದ್ದು, ಈ ಜಾಗವು ಧರ್ಮಸ್ಥಳಕ್ಕೆ ಸೇರಿರುವುದರಿಂದ ಅವರು ಯಾವುದೇ ಸರಕಾರಿ ಸೌಲಭ್ಯಗಳು ದೊರಕದೆ ವಂಚಿತರಾಗಿದ್ದರು. ಈ ಸಮಸ್ಯೆಯನ್ನು ಈ ಹಿಂದೆಯು ಹಲವು ಜನರಲ್ಲಿ ತಿಳಿಸಿದರೂ ಯಾವೂದೇ ಪ್ರಯೋಜನವಾಗದೇ ಜಾಗವನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿ ಅರ್ಧದಲ್ಲಿ ಕೈ ಬಿಟ್ಟಿರುತ್ತಾರೆ. ಸ್ಥಳೀಯರು ಈ ಸಮಸ್ಯೆಯನ್ನು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರಲ್ಲಿ ಮನವಿ ಮಾಡಿಕೊಂಡಾಗ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆ ಕುಟುಂಬಗಳು ಭರವಸೆ ನೀಡಿದ್ದರು.
ಅದರಂತೆ ಸುಮಾರು 4 ವರ್ಷದ ಸತತ ಪ್ರಯತ್ನದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರಲ್ಲಿ ವಿಚಾರವನ್ನು ತಿಳಿಸಿದಾಗ ಜಾಗವನ್ನು ದಾನಪತ್ರ ಮಾಡು ನೀಡುವುದಾಗಿ ತಿಳಿಸಿದರು.
ಜಾಗದ ದಾಖಲೆ ಪತ್ರ ಮಾಡಲು ಬೇಕಾದ ವ್ಯವಸ್ಥೆಯ ಪೂರ್ತಿ ಜವಾಬ್ದಾರಿಯನ್ನು ಹೊತ್ತ ಅಶೋಕ್ ಕುಮಾರ್ ರೈ ಇದೀಗ ಜಾಗದ ರೆಕಾರ್ಡ್ ಮಾಡಿಕೊಡವಲ್ಲಿ ಯಶಸ್ವಿಯಾಗಿದ್ದು, ಕುಟುಂಬಗಳಿಗೆ ಜಾಗದ ದಾಖಲೆ ಪತ್ರಗಳನ್ನು ರೈ ಎಸ್ಟೇಟ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ವಿತರಿಸಿದರು.
ದಾಖಲೆಗಳನ್ನು ವಿತರಿಸಿ , ಇಂತಹ ಬಡವರಿಗೆ ಸಹಾಯ ಮಾಡುವುದರಿಂದ ನನಗೆ ಧನ್ಯತಭಾವ ಸಿಕ್ಕಿದೆ ಮತ್ತು ಇನ್ನು ಮುಂದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಿರಿ ಎಂದು ತಿಳಿಸಿದರು.
ಕದಿಕ್ಕಾರು ಜಾಗದ ದಾಖಲೆಗಳನ್ನು ಪಡಕೊಂಡ 18 ಕುಟುಂಬ ದವರು ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಫಲಾನಿಭವಿ ಮಹಾಲಿಂಗ ಮತ್ತು ರವಿ ಉಪಸ್ಥಿತಿತರಿದ್ದರು. ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ಕುದ್ಮಾನು ಕಾರ್ಯಕ್ರಮ ನಿರೂಪಣೆ ಮಾಡಿ ಸ್ವಾಗತಸಿ ವಂದಿಸಿದರು. ಪ್ರವೀಣ್ ಕುಮಾರ್ ಗುರುಂಪುನಾರ್ ಸಹಕರಿಸಿದರು.