ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ 2010ರಿಂದ ಕಾರ್ಯಾಚರಿಸುತ್ತಿರುವ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಮತ್ತು ಕಂಪ್ಯೂಟರ್ ತರಬೇತಿಗೆ ಹೆಸರಾದ IRCMD ಶಿಕ್ಷಣ
ಸಂಸ್ಥೆಯಲ್ಲಿ ತರಬೇತಿ ಪಡೆದ 5 ವಿದ್ಯಾರ್ಥಿಗಳು 2021ನೇ ಸಾಲಿನ ಕ್ಯಾಂಪ್ಕೋ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಶ್ಮಿತಾ ಎಂ.ಎಸ್, ರಶ್ಮಿ ಇ, ಮಧುರಾ ವೈ, ಸಂಪ್ರೀತ್ ಕೆ.ಎಸ್, ಅಖಿನ್ ಕೋಟ್ಯಾನ್ ತೇರ್ಗಡೆಗೊಂಡು
ಸಂದರ್ಶನಕ್ಕೆ ಆಯ್ಕೆಗೊಂಡಿರುತ್ತಾರೆ.
2010 ರಿಂದ ಸಾವಿರಾರು ಉದ್ಯೋಗಾಂಕ್ಷಿಗಳ ಕನಸನ್ನು ನನಸಾಗಿಸುವ ನಿಟ್ಟಿನಿಂದ ಸ್ಥಾಪನೆಗೊಂಡ ಪುತ್ತೂರಿನ ಏಕೈಕ ತರಬೇತಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವುದೇ
IRCMD ಶಿಕ್ಷಣ ಸಂಸ್ಥೆಯ ಮುಖ್ಯ ಧೈಯವಾಗಿದ್ದು, 12ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ಉಚಿತ ತರಬೇತಿಯು ನೀಡಲಾಗುತ್ತಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಸಕ್ತರು ದೂರವಾಣಿ 9632320477 ಗೆ ಕರೆಮಾಡಿ ನೋಂದಾಯಿಸಬಹುದಾಗಿದೆ.