ಉಪ್ಪಿನಂಗಡಿ: ವ್ಯಕ್ತಿಯೋರ್ವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಹೆಂಡತಿ ಮತ್ತು ಮಗಳನ್ನು ದಾರಿ ಮಧ್ಯೆ ಬಿಟ್ಟು ಹೋದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ನಿರಾಯ ನಿವಾಸಿ ನಾರಾಯಣ ಗೌಡರ ಪತ್ನಿ ಜಯಪ್ರಿಯ ಎಂಬವರು ದೂರುದಾರರು.
ಜಯಪ್ರಿಯ ರವರು 25/2012 ರಂದು ನಾರಾಯಣ ಗೌಡ ರನ್ನು ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಓರ್ವ ಮಗ ಬುದ್ಧಿಮಾಂದ್ಯನಾಗಿದ್ದು, ನಾರಾಯಣ ಗೌಡ ಮದುವೆಯಾದ ಬಳಿಕ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಈ ಮೊದಲು ಜಯಪ್ರಿಯ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನಾ ಕೇಂದ್ರಕ್ಕೆ ದೂರು ನೀಡಿದ್ದರು.
ಅ.27 ರಂದು ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಾರಾಯಣ ಗೌಡ, ಜಯಪ್ರಿಯರೊಂದಿಗೆ ಜಿನಸಿ ವಿಷಯವಾಗಿ ಜಗಳವಾಡಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಮಗಳನ್ನು ಮತ್ತು ಹೆಂಡತಿಯನ್ನು ದಾರಿ ಮಧ್ಯೆಯೇ ಬಿಟ್ಟು, ಮಗನನ್ನು ಜೊತೆ ಕರೆದುಕೊಂಡು ಹೋದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ.115/2021 ಕಲಂ: 498(A) 504, 323 IPC ಯಂತೆ ಪ್ರಕರಣ ದಾಖಲಾಗಿದೆ.