ಜನವರಿ 26 : 72 ನೇ ಗಣರಾಜೋತ್ಸವದ ಅಂಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ಕಂಬಳಬೆಟ್ಟು ಇದರ ವತಿಯಿಂದ ಸ್ಚಚ್ಚತಾ ಕಾರ್ಯಕ್ರಮ ಜರಗಿತು.
ಕಂಬಳಬೆಟ್ಟು ಪರಿಸರಗಳಲ್ಲಿ ಪಕ್ಷದ ಕಾರ್ಯಕರ್ತರು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಿಟ್ಟರು ,ಸಾರ್ವಜನಿಕ ಸ್ಥಳಗಳಲ್ಲಿದ್ದ ಪ್ಲಾಸ್ಟಿಕ್,ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಪರಿಸರ ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಿದರು.ಈ ಕಾರ್ಯಕ್ರಮದಲ್ಲಿ ಕಂಬಳಬೆಟ್ಟು ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಿದ್ದೀಕ್, ಮರಿಯಮ್ಮ, ಸಾಬಿರ ಮತ್ತು ಸ್ಥಳೀಯ ನಾಯಕರು,ಕಾರ್ಯಕರ್ತರು ಭಾಗವಹಿಸಿದ್ದರು.