ಪುತ್ತೂರು: 2020-23 ರ ಸಾಲಿನ ಭಾರತೀಯ ಜನತಾಪಾರ್ಟಿಯ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿಸದಸ್ಯರಾಗಿ ಅಕ್ಷಯ್ ರೈ ದಂಬೆಕ್ಯಾನಪುನರಾಯ್ಕೆಯಾಗಿದ್ದಾರೆ. ರಾಜ್ಯ ಯುವ ಮೋರ್ಛಾಅಧ್ಯಕ್ಷ ಡಾ|| ಕೆ.ಸಿ ಸಂದೀಪ್ ಕುಮಾರ್ ಈ ಆಯ್ಕೆಮಾಡಿದ್ದಾರೆ.ಅಕ್ಷಯ್ ರೈ ದಂಬೆಕ್ಕಾನರವರು 2002 ರಿಂದ ಎಬಿವಿಪಿಪುತ್ತೂರು ಘಟಕದಲ್ಲಿ ಕೆಲಸ ಆರಂಭಿಸಿ ಬಳಿಕಬೆಂಗಳೂರಿನಲ್ಲಿ ನಗರ ಮಂಡಲದಲ್ಲಿ ಯುವಮೋರ್ಛಾದಲ್ಲಿ ಕೆಲಸ ಮಾಡಿದ್ದರು. ಬಳಿಕ 2012 ರನಂತರ 2 ಬಾರಿ ಬೆಂಗಳೂರು ಯುವ ಮೋರ್ಛಾದಲ್ಲಿವಿವಿಧ ಜವಬ್ದಾರಿಯನ್ನು ಪಡೆದು ಪಕ್ಷನಿಷ್ಠೆ ತೋರಿಸಿದ್ದರು.
2016 ರಲ್ಲಿ ರಾಜ್ಯಯುವ ಮೋರ್ಚಾದಲ್ಲಿಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿವಿಧಾನಸಭಾ ಚುನಾವಣೆಯಲ್ಲಿ ೫ ಕ್ಕೂ ಹೆಚ್ಚು ಕ್ಷೇತ್ರದಲ್ಲಿಜವಬ್ದಾರಿಯನ್ನು ಪಡೆದು ಕೆಲಸ ನಿರ್ವಹಿಸಿದ್ದರು.ಲೋಕಸಭಾ ಚುನಾವಣೆಯಲ್ಲಿಯೂ ಜವಬ್ದಾರಿಪಡೆದುಕೊಂಡು ಕೆಲಸ ಮಾಡಿದ ಅನುಭವ ಇವರಿಗಿದೆ.ಇದೀಗ 2 ನೇ ಬಾರಿಗೆ ರಾಜ್ಯ ಯುವ ಮೋರ್ಛಾಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದಾರೆ.
ಇವರು ಪಕ್ಷದಹೆಸರಿನಲ್ಲಿ ಕಿರುಚಿತ್ರಗಳನ್ನು ಕೂಡ ನಿರ್ಮಾಣಮಾಡುತ್ತಿದ್ದಾರೆ.ಅಕ್ಷಯ್ ರೈ ದಂಬೆಕ್ಕಾನರವರು ನೂಜಿ ತರವಾಡು ಮನೆಸದಾಶಿವ ರೈ ದಂಬೆಕ್ಕಾನ ಮತ್ತು ಪ್ರಭಾ ಎಸ್.ರೈಯವರಪುತ್ರರಾಗಿದ್ದಾರೆ.