ಮಂಗಳೂರು: ನಗರ ಉತ್ತರ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿಡಲು ಮತ್ತು ಸದರಿ ವೃತ್ತದಲ್ಲಿ ವೀರ ಸಾವರ್ಕರ್ ಪುತ್ಥಳಿ ಸ್ಥಾಪಿಸುವಂತೆ ಶಾಸಕ ಡಾ. ಭರತ್ ಶೆಟ್ಟಿ ಯವರು ಮಹಾನಗರ ಪಾಲಿಕೆಯ ಮೇಯರ್ ರಿಗೆ ಮನವಿ ಸಲ್ಲಿಸಿದರು.
ಭಾರತ ಸ್ವಾತಂತ್ರ್ಯ ಹೋರಾಟಗಾರ, ಎಳವೆಯಲ್ಲೇ ರಾಷ್ಟ್ರ ಪರಚಿಂತನೆಯನ್ನು ತನ್ನೊಳಗೆ ತುಂಬಿಕೊಂಡು, ಸಂಪೂರ್ಣ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ನಾಯಕ ದಾಮೋದರ್ ಸಾವರ್ಕರ್ ಇಂತಹ ಮಹಾನ್ ಚೇತನಕ್ಕೆ ಗೌರವದ ದ್ಯೋತಕವಾಗಿ ಮತ್ತು ಅವರ ಬಲಿದಾನವನ್ನು
ಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ರವರ ಹೆಸರನ್ನು ಸುರತ್ಕಲ್
ಜಂಕ್ಷನ್‌ನಲ್ಲಿರುವ ವೃತ್ತಕ್ಕೆ ಇಡುವಂತೆ ಮತ್ತು ಅವರ ಪುತ್ಥಳಿಯನ್ನು ಸ್ಥಾಪಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.