ಪುತ್ತೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ‘ಗೋ ಪೂಜೆ’ ಕಾರ್ಯಕ್ರಮ ನ.5 ರಂದು ಬನ್ನೂರು ಸುಜಯ ರೈ ಯವರ ಮನೆಯಲ್ಲಿ ನಡೆಯಿತು.
ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ ರೈ, ಬ್ಲಾಕ್ ಉಪಾಧ್ಯಕ್ಷರಾದ ವಿಶಾಲಾಕ್ಷಿ ಬನ್ನೂರು, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್ ಭಾಗವಹಿಸಿದರು. ಕಾರ್ಯಕ್ರಮವನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾರದ ಅರಸ್ ರವರು ಆಯೋಜಿಸಿದ್ದರು.